ಬ್ಯೂಟಿ ಪಾರ್ಲರ್ಗೆ ಹೋದ ಯುವತಿ ನಾಪತ್ತೆ
ಕಾಸರಗೋಡು: ಬ್ಯೂಟಿ ಪಾರ್ಲರ್ಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕಾಞಂಗಾಡ್ ಸೌತ್ ಕಲ್ಲಂಚಿರದ ಶಮ್ನ (18) ಎಂಬಾಕೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಮ್ನ ಕಾಞಂಗಾಡ್ ಸೌತ್ನಲ್ಲಿರುವ ಬ್ಯೂಟಿ ಪಾರ್ಲ ರ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗುರುವಾರ ಬೆಳಿಗ್ಗೆ 10 ಗಂಟೆಗೆ ಬ್ಯೂಟಿ ಪಾರ್ಲರ್ಗೆಂದು ತಿಳಿಸಿ ಹೋದ ಆಕೆ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.