ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳ ವಶ: ಓರ್ವ ಸೆರೆ
ಕುಂಬಳೆ: ಕರ್ನಾಟಕದಿಂದ ಕಾಸರಗೋಡು ಭಾಗಕ್ಕೆ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಕುಂಬಳೆ ಪೊಲೀಸರು ವಶಪಡಿ ಸಿಕೊಂ ಡಿದ್ದಾರೆ. ಈ ಸಂಬAಧ ಮಧೂರು ಹಿದಾಯತ್ನಗರ ಚೆಟ್ಟುಂಗುಳಿ ನಿವಾಸಿ ರಾಶಿದ್ (31) ಎಂಬಾತನನ್ನು ಬಂಧಿಸಲಾಗಿದೆ. ಪಿಕಪ್ ವಾಹನದಲ್ಲಿದ್ದ 1,14,878 ಪ್ಯಾಕೆಟ್ ತಂಬಾಕು ಉತ್ಪನ್ನಗಳು ಹಾಗೂ 60 ಕಿಲೋ ತಂಬಾಕು ಹುಡಿಯನ್ನು ವಶಪಡಿಸಲಾಗಿದೆ. ನಿನ್ನೆ ರಾತ್ರಿ ಕುಂಬಳೆ ಠಾಣೆ ಇನ್ ಸ್ಪೆಕ್ಟರ್ ಜಿಜೀಶ್ ಪಿ.ಕೆ ನೇತೃತ್ವದಲ್ಲಿ ಮೊಗ್ರಾಲ್ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಗಳೂರು ಭಾಗದಿಂದ ಬರುತ್ತಿದ್ದ ಪಿಕಪ್ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ಎಸ್ಐ ಕೆ. ಶ್ರೀಜೇಶ್, ಪ್ರೊಬೆಶನಲ್ ಎಸ್ಐ ಆನಂದ ಕೃಷ್ಣ, ಎಎಸ್ಐ ಸುರೇಶ್ ಮೊದಲಾದವರು ಕಾರ್ಯಾಚರಣೆ ತಂಡದಲ್ಲಿದ್ದರು.