ಮಂಗಲ್ಪಾಡಿ ಪಂ. 12 ಲಕ್ಷ ರೂ. ವ್ಯಯಿಸಿ ಸ್ಥಾಪಿಸಿದ ಸಿ.ಸಿ. ಕ್ಯಾಮರಾಗಳು ನಿಷ್ಕ್ರಿಯ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ತಿಂಗಳ ಹಿಂದೆ 12 ಲಕ್ಷ ರೂಪಾಯಿ ವ್ಯಯಿಸಿ ವಿವಿಧೆಡೆ ಸ್ಥಾಪಿಸಿದ ನಾಲ್ಕು ಸಿಸಿ ಕ್ಯಾಮರಾಗಳು ನಿಷ್ಕ್ರಿಯಗೊಂಡಿವೆ. ಇದರ ಪರಿಣಾಮ ಈ ಕ್ಯಾಮರಾಗಳ ಮುಂದೆ ಏನು ಸಂಭವಿಸಿದರೂ ತಿಳಿಯಲಾಗದ ಸ್ಥಿತಿ ಉಂಟಾಗಿದೆ. ಈ ಕ್ಯಾಮರಾಗಳು ಕಾರ್ಯಾಚರಿಸುತ್ತಿದ್ದಲ್ಲಿ ಮೊನ್ನೆ ಮಧ್ಯಾಹ್ನ ಉಪ್ಪಳ ಪೇಟೆಯಲ್ಲಿ ಎ.ಟಿ.ಎಂಗೆ ತುಂಬಿಸಲು ತಂದಿದ್ದ ೫೦ ಲಕ್ಷ ರೂಪಾಯಿ ಕಳವುಗೈದು ಪರಾರಿಯಾದ ಆರೋಪಿಗಳನ್ನು ಗುರುತು ಹಚ್ಚಲು ಸಾಧ್ಯವಾಗುತ್ತಿತ್ತು.
ಮಂಗಲ್ಪಾಡಿ ಪಂಚಾಯತ್ನ ವಿವಿಧೆಡೆ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚುವ ಉದ್ದೇಶದಿಂದ ಪಂಚಾಯತ್ ಫಂಡ್ ಬಳಸಿ ಉಪ್ಪಳ ಪೇಟೆ, ಹನಫಿ ಬಜಾರ್, ಕೈಕಂಬ, ಬಂದ್ಯೋಡು ಎಂಬಿಡೆಗಳಲ್ಲಿ ಒಟ್ಟು ನಾಲ್ಕು ಸಿಸಿ ಕ್ಯಾಮರಾಗಳನ್ನು ಸ್ಥಾಪಿಸಲಾಗಿತ್ತು. ಆದರೆ ಅನಂತರ ಈ ಕ್ಯಾಮರಾಗಳು ಕಾರ್ಯಾಚರಿಸುತ್ತಿವೆಯೇ ಎಂದು ನೋಡಿಲ್ಲವೆನ್ನಲಾಗಿದೆ. ಇದೀಗ ಮೊನ್ನೆ ಮಧ್ಯಾಹ್ನ ಉಪ್ಪಳ ಪೇಟೆಯಲ್ಲಿ ಎಟಿಎಂಗೆ ತುಂಬಿಸಲು ತಂದಿದ್ದ ಹಣವನ್ನು ವಾಹನದ ಗಾಜು ಪುಡಿಗೈದು ಕಳ್ಳರು ದೋಚಿದ ಬಳಿಕ ತನಿಖೆ ನಡೆಸುವ ಅಂಗವಾಗಿ ಪೊಲೀಸರು ಪರಿಶೀಲಿಸಿದಾಗಲೇ ಸಿಸಿ ಕ್ಯಾಮರಾಗಳು ಕಾರ್ಯಾಚರಿ ಸುತ್ತಿಲ್ಲವೆಂದು ತಿಳಿದುಬಂದಿದೆ. ಈ ಕ್ಯಾಮರಾಗಳ ನಿರ್ಮಾಣ ಸಂಸ್ಥೆಯಾದ ಕೆಲ್ಟ್ರೋನ್ನೊಂದಿಗೆ ಪೊಲೀಸರು ಸಂಪರ್ಕಿಸಿದಾಗ ಕ್ಯಾಮರಾಗಳು ಹಾನಿಗೀಡಾದ ಬಗ್ಗೆ ಇದುವರೆಗೆ ಪಂಚಾಯತ್ನಿಂದ ಯಾವುದೇ ದೂರು ಲಭಿಸಿಲ್ಲ. ಲಭಿಸಿದರೆ ತಕ್ಷಣ ದುರಸ್ತಿ ಮಾಡಬಹುದಿತ್ತು. ಆದರೆ ಕಾರ್ಯಾ ಚರಿಸದ ಕ್ಯಾಮರಾದಲ್ಲಿ ಯಾವುದೇ ದೃಶ್ಯ ಸೆರೆಯಾಗಿರಲು ಸಾಧ್ಯವಿಲ್ಲವೆಂದು ಕಂಪೆನಿ ತಿಳಿಸಿದೆ ಎನ್ನಲಾಗುತ್ತಿದೆ. ಇದರಿಂದ ಪಂಚಾಯತ್ ಫಂಡ್ನಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಸ್ಥಾಪಿಸಿದ ಕ್ಯಾಮರಾಗಳಿಂದ ಯಾವುದೇ ಪ್ರಯೋ ಜನವಿಲ್ಲದಾಗಿದೆ.