ಮಂಜೇಶ್ವರ ಪಂಚಾಯತ್ ಬಜೆಟ್‌ನಲ್ಲಿ ಕೃಷಿ, ತ್ಯಾಜ್ಯ ನಿರ್ಮೂಲನೆ, ವಸತಿ ಯೋಜನೆಗಳಿಗೆ ಆದ್ಯತೆ

ಮಂಜೇಶ್ವರ : ತ್ಯಾಜ್ಯ ನಿರ್ಮೂ ಲನ, ಕೃಷಿ ಹಾಗೂ ವಸತಿ ಯೋಜನೆ ಗಳಿಗೆ ಪ್ರಾಧಾನ್ಯತೆ ನೀಡಿ ಮಂಜೇಶ್ವರ ಗ್ರಾಮ ಪಂಚಾಯತ್‌ನ ಬಜೆಟ್‌ನ್ನು ಪಂಚಾಯತ್ ಉಪಾಧ್ಯಕ್ಷ ಮೊಹ ಮ್ಮದ್ ಸಿದ್ದೀಖ್ ಮಂಡಿಸಿದರು.
ಪಂಚಾಯತ್ ಎದುರಿಸುತ್ತಿರುವ ದೊಡ್ಡ ಸಮಸ್ಯೆ ತ್ಯಾಜ್ಯ ವಸ್ತುಗಳ ನಿರ್ವಹಣೆ. ಹಸಿರು ಕ್ರಿಯಾಸೇನೆಯ ನೆರವಿನಿಂದ ಪ್ರಸ್ತುತ ಮನೆ, ಅಂಗಡಿ ಗಳಿಂದ ಬಳಕೆದಾರರ ಶುಲ್ಕ ಸಂಗ್ರ ಹಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು, ಅದನ್ನು ವಿಲೇವಾರಿ ಮಾಡಲು ತೀವ್ರ ತೊಂದರೆ ಎದುರಿಸಲಾಗುತ್ತಿದೆ. ಅದಕ್ಕೆ ಪರಿಹಾರವಾಗಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಎಫ್‌ಎಸ್‌ಟಿಪಿ ಸ್ಥಾಪಿಸಲಾಗುವುದು. ಇದಕ್ಕಾಗಿ ಶುಚಿತ್ವ ಮಿಷನ್‌ನಿಂದ ಲಭಿಸುವ 2 ಕೋಟಿ ರೂ. ಅನುದಾನವನ್ನು ಬಳಸಲು ತೀರ್ಮಾನಿಸಲಾಗಿರುವುದಾಗಿ ಅವರು ತಿಳಿಸಿದರು. ಕೃಷಿ ಕ್ಷೇತ್ರಕ್ಕೆ ಒಟ್ಟು 85 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಅವರು ಹೇಳಿದರು. ವಸತಿ ಯೋಜನೆಯಾದ ಲೈಫ್ ಮಿಷನ್ ಜೊತೆಗೆ ಜಾರಿಗೆ ತರಲಾದ ಲೈಫ್ ವಸತಿ ಯೋಜನೆಗೆ ಮೂರು ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿದೆ. ಮಹಿಳೆಯರ ಅಭಿ ವೃದ್ಧಿಗಾಗಿ ಒಟ್ಟು 50 ಲಕ್ಷ ರೂ.ಗಳನ್ನು , ಮಕ್ಕಳ ವಲಯದಲ್ಲಿ 60,00,000 ರೂ. ಗಳನ್ನು, ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವವರ ಉನ್ನತಿಗಾಗಿ 37 ಲಕ್ಷ ರೂ.ಗಳನ್ನು, ಮೂಲಸೌಕರ್ಯ ಸುಧಾರಣೆಗೆ ಒಟ್ಟು 5.5 ಕೋಟಿ ರೂ.ಗಳನ್ನು, ವಿವಿಧ ವಾರ್ಡ್ಗಳಲ್ಲಿರುವ ಕುಡಿಯುವ ನೀರಿನ ಯೋಜನೆಗಳ ಸುಧಾರಣೆ ಮತ್ತು ಹೊಸ ಯೋಜನೆಗಳಿಗೆ 38 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. 2025-26 ನೇ ಹಣಕಾಸು ವರ್ಷದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 45 ಲಕ್ಷ ರೂ.ಗಳನ್ನು, ಆರೋಗ್ಯ ಕ್ಷೇತ್ರಕ್ಕೆ 30 ಲಕ್ಷ ರೂ.ಗಳನ್ನು , ತ್ಯಾಜ್ಯ ವಿಲೇ ವಾರಿ ಕ್ಷೇತ್ರಕ್ಕೆ ಒಟ್ಟು 70 ಲಕ್ಷ ರೂ.ಗಳನ್ನು, ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ 9 ಲಕ್ಷ ರೂ.ಗಳನ್ನು, ಡೈರಿ ಗುಂಪುಗಳ ಮೂಲಕ ಸಂಗ್ರಹಿಸಲಾದ ಹಾಲಿಗೆ ಸಬ್ಸಿಡಿ ವಿತರಣೆಗೆ 4.5 ಲಕ್ಷ ರೂ. ನಿಗದಿಪಡಿಸಲಾಗಿದೆ.
ಮಂಜೇಶ್ವರ ಪಂಚಾಯತ್ ನ 2025-26ನೇ ಹಣಕಾಸು ವರ್ಷದ ಬಜೆಟ್ 28,49,81,819 ಕೋಟಿ ರೂ. ಆದಾಯ, ಹಾಗೂ 28,16,31,000 ಕೋಟಿ ರೂ. ವೆಚ್ಚ, 33,50,819 ಲಕ್ಷ ರೂ. ಮೀಸಲು ಹೊಂದಿರುವುದಾಗಿ ಉಪಾಧ್ಯಕ್ಷ ಬಜೆಟ್ ಮಂಡನೆಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page