ಮಂಜೇಶ್ವರ ಮಂಡಲ ಕಾಂಗ್ರೆಸ್: ನೂತನ ಮಂಡಲ ಅಧ್ಯಕ್ಷರ ವಿರುದ್ಧ ಸಭೆಯಲ್ಲಿ ಪ್ರತಿಭಟನೆ
ಮಂಜೇಶ್ವರ: ನಿನ್ನೆ ಜರಗಿದ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಹೊಸತಾಗಿ ನೇಮಕಮಾಡಿದ ಮಂಡಲ ಅಧ್ಯಕ್ಷರ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲಾಯಿತು. ಹೊಸ ಅಧ್ಯಕ್ಷರ ಬಗ್ಗೆ ವಿರೋಧ ವ್ಯಕ್ತಪಡಿಸಿ ಈ ಹಿಂದೆ ಡಿಸಿಸಿಗೆ ತಿಳಿಸಿದ್ದರೂ ಇದುವರೆಗೂ ಯಾವುದೇ ಪರಿಹಾರ ಉಂಟಾಗದ ಬಗ್ಗೆಯೂ ಸಭೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಲಾಯಿತು. ಕೆಪಿಸಿಸಿ ಹೇಳಿದ ನ.೫ರ ಮುಂಚಿತ ಮಂಡಲ ಸಮಸ್ಯೆಗಳಿಗೆ ಪರಿಹಾರ ಉಂಟಾಗದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದೆಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.