ಮತ್ತೆ ಮಳೆ ತೀವ್ರ: ಮುನ್ನೆಚ್ಚರಿಕೆ
ತಿರುವನಂತಪುರ: ರಾಜ್ಯದಲ್ಲಿ ಮತ್ತೆ ಮಳೆ ತೀವ್ರಗೊಳ್ಳುತ್ತಿದೆ. ಇಂದಿನಿಂದ ಮತ್ತೆ ಕೆಲವೆಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕಲ್ಲಿಕೋಟೆ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ನಾಳೆ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಹಾಗೂ ಶುಕ್ರವಾರ ಎರ್ನಾಕುಳಂ, ಕಲ್ಲಿಕೋಟೆ, ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಝಾರ್ಖಂಡ್‌ನ ಮೇಲ್ಭಾಗ ದಲ್ಲಿ ವಾಯುಭಾರ ಕುಸಿತ ನೆಲೆಗೊಂಡ ಕಾರಣ ಮಳೆ ತೀವ್ರ ವಾಗಿ ಮುಂದುವರಿಯುತ್ತಿದೆ ಎಂದು ತಿಳಿಸಲಾಗಿದೆ. ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಗಾಳಿಗೆ ಸಾಧ್ಯತೆ ಇದೆ.