ಮದ್ಯದ ಗುಂಗಿನಲ್ಲಿ ವಾಹನ ಚಲಾಯಿಸಿದವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ; ಒಂದೇ ರಾತ್ರಿ 26 ಮಂದಿ ವಶಕ್ಕೆ: 50ಕ್ಕೂ ಹೆಚ್ಚು ವಾಹನಗಳು ಕಸ್ಟಡಿಗೆ
ಕಾಸರಗೋಡು: ಮದ್ಯದ ಗುಂಗಿನಲ್ಲಿ ವಾಹನ ಚಲಾಯಿಸುತ್ತಿ ರುವವರ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿ ದ್ದಾರೆ.ಇದರಂತೆ ಶನಿವಾರ ರಾತ್ರಿ ಮಾತ್ರವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ 26 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾತ್ರಿ ಆರಂಭಗೊಂಡ ಈ ಕಾರ್ಯಾಚರಣೆಯು ನಿನ್ನೆ ಬೆಳಿಗ್ಗೆ ತನಕ ಮುಂದುವರಿದಿದೆ.
ಇದಕ್ಕೆ ಸಂಬಂಧಿಸಿ 30ರಷ್ಟು ಬೈಕ್ಗಳು ಸೇರಿ 50ರಷ್ಟು ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದು ಮಾತ್ರವಲ್ಲ ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನಗೈಯ್ಯು ವವರ ಪತ್ತೆಗಾಗಿಯೂ ಪೊಲೀಸರು ಇನ್ನೊಂದೆಡೆ ಪ್ರತ್ಯೇಕ ಕಾರ್ಯಾಚರಣೆಗಿಳಿದಿದ್ದಾರೆ. ಇಂತಹ ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆಯೆಂದು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ವಿ.ಬಿನೋಯ್ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ತಲಾ ನಾಲ್ಕು, ಬೇಡಗ, ಬೇಕಲ ಪೊಲೀಸ್ ಠಾಣೆಗಳಲ್ಲಿ ತಲಾ ಮೂರು, ಚಂದೇರ, ಕುಂಬಳೆ, ಬದಿಯಡ್ಕ ಪೊಲೀಸ್ ಠಾಣೆಗಳಲ್ಲಿ ತಲಾ ಎರಡು, ಚಿತ್ತಾರಿಕ್ಕಲ್, ಚೀಮೇನಿ, ರಾಜಪುರಂ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳಲ್ಲಿ ತಲಾ ಒಂದರಂತೆ ಪ್ರಕರಣ ದಾಖಲಿಸಲಾಗಿದೆ.