ಮದ್ಯ ವಶ: ಓರ್ವ ಸೆರೆ
ಕಾಸರಗೋಡು: ಬದಿಯಡ್ಕ ಅಬಕಾರಿ ರೇಂಜ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ರ ನೇತೃತ್ವದ ತಂಡ ಅಡೂರು ಅತ್ತನಾಡಿ ಶಿವಾಜಿ ನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಎಂಎಲ್ನ ೨೨ ಪ್ಯಾಕೆಟ್ (೩.೯೬ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ಅಡೂರು ಬೆಳ್ಳಚ್ಚೇರಿಯ ಸುಕುಮಾರನ್ (೩೨) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿಇಒಗಳಾದ ಮನೋಜ್ ಪಿ, ಮೋಹನ್ ಕುಮಾರ್, ವಿನೋದ್ ಕೆ, ಸಬಿತ್ಲಾಲ್, ಸದಾನಂದನ್, ಮತ್ತು ಚಾಲಕ ರಾಧಾಕೃಷ್ಣನ್ ಎಂಬವರು ಒಳಗೊಂಡಿದ್ದಾರೆ. ಇದೇ ರೀತಿ ಮಂಜೇಶ್ವರ ಕುಬಣೂರು ಬೇಕೂರಿನಲ್ಲಿ ಕುಂಬಳೆ ರೇಂಜ್ನ ಎಕ್ಸೈಸ್ ಪ್ರಿವೆಂಟಿವ್ ಆಫೀಸರ್ ಸುರೇಶ್ಬಾಬು ಕೆ.ಯು.ರ ನೇತೃತ್ವದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೪.೫ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.