ಮಧೂರು ಪಂ. ಕಚೇರಿಯಲ್ಲಿ ವಿಜಿಲೆನ್ಸ್ ತಪಾಸಣೆ
ಕಾಸರಗೋಡು: ಮಧೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ಥಳೀಯಾಡಳಿತ ಆಂತರಿಕ ವಿಜಿಲೆನ್ಸ್ ವಿಭಾಗ ನಿನ್ನೆ ತಪಾಸಣೆ ನಡೆಸಿತು. ಹಸಿರು ಕ್ರಿಯಾ ಸೇನೆಗೆ ಸಂಬಂಧಿಸಿದ ತ್ಯಾಜ್ಯ ಸಂಗ್ರಹ, ಖಾಸಗಿ ಕಂಪೆನಿ ಯೊಂದಿಗೆ ಮಾಡಿಕೊಂಡ ಒಪ್ಪಂದ ದಾಖಲೆಗಳನ್ನು ವಿಜಿಲೆನ್ಸ್ ಪರಿಶೀ ಲಿಸಿತು. ಸರಕಾರದ ನಿಯಂತ್ರಣದ ಲ್ಲಿರುವ ಏಜೆನ್ಸಿಯನ್ನು ಹೊರತುಪಡಿಸಿ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದುದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿಪಕ್ಷದ ಆರೋಪದಂತೆ ವಿಜಿಲೆನ್ಸ್ ಪರಿಶೀಲನೆ ನಡೆಸಿದೆ. ಇದೇ ವೇಳೆವಿಪಕ್ಷದ ಆರೋಪ ಆಧಾರ ರಹಿತ ವೆಂದು ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ತಿಳಿಸಿದ್ದಾರೆ.