ಮನೆಗೆ ನುಗ್ಗಿ ಕೊಲೆ ಬೆದರಿಕೆ: ಕೇಸು ದಾಖಲು
ಕುಂಬಳೆ: ಮನೆಗೆ ಅತಿಕ್ರಮಿಸಿ ನುಗ್ಗಿ ಮಗನಿಗೆ ಕೊಲೆ ಬೆದರಿಕೆಯೊ ಡ್ಡಿದ ಬಗ್ಗೆ ಗೃಹಿಣಿ ನೀಡಿದ ದೂರಿನಂತೆ ಬಂದ್ಯೋಡು ಅಡ್ಕ ನಿವಾಸಿ ಹಮೀದ್ ಸಿ.ಎ. ಎಂಬಾ ತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಂಗಲ್ಪಾಡಿ ಚುಕ್ರಿಯಡ್ಕ ಅಡ್ಕದ ಇಬ್ರಾಹಿಂರ ಪತ್ನಿ ಆಯಿಶಾಬಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಈ ತಿಂಗಳ 12ರಂದು ಮಧ್ಯಾಹ್ನ 2.30ರ ವೇಳೆ ಮನೆಗೆ ಅತಿಕ್ರಮಿಸಿ ನುಗ್ಗಿದ ಹಮೀದ್ ತನ್ನ ಕಿರಿಯ ಪುತ್ರನಿಗೆ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆಯಿಶಾಬಿ ಆರೋಪಿಸಿದ್ದಾರೆ. ಅಯಿಶಾಬಿಯ ಹಿರಿಯ ಪುತ್ರನೊಂದಿಗೆ ಹಮೀದ್ಗೆ ದ್ವೇಷವಿದೆಯೆಂದೂ, ಇದೇ ಕಾರಣದಿಂದ ಕಿರಿಯ ಪುತ್ರನಿಗೆ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ.