ಮನೆಯಲ್ಲಿ ಅಸ್ವಸ್ಥಗೊಂಡ ಯುವಕ ಆಸ್ಪತ್ರೆಗಿರುವ ದಾರಿ ಮಧ್ಯೆ ಮೃತ್ಯು

ಪೆರ್ಲ: ಮನೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಯುವಕ ಆಸ್ಪತ್ರೆಗಿರುವ ದಾರಿ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಪೆರ್ಲ  ಬಳಿಯ ಸರ್ಪಕಯ ಎಂಬಲ್ಲಿನ ಶೇಷಪ್ಪ ನಾಯ್ಕ ಎಂಬವರ ಪುತ್ರ ವೆಂಕಪ್ಪ ನಾಯ್ಕ (45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ವೆಂಕಪ್ಪ ನಾಯ್ಕ ಮನೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು  ಉಕ್ಕಿನಡ್ಕ ಮೆಡಿಕಲ್ ಕಾಲೇಜಿಗೆ ತಲುಪಿಸಲಾಗಿತ್ತು. ಅಲ್ಲಿಂದ ಕಾಸರಗೋಡು ಜನರಲ್  ಆಸ್ಪತ್ರೆಗೆ ತಲುಪಿಸಿದ್ದು, ಆದರೆ ಸ್ಥಿತಿ ಗಂಭೀರವಾದುದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.

ಮೃತರು ತಂದೆ, ತಾಯಿ ಪಾರ್ವತಿ, ಪತ್ನಿ ರಾಜೇಶ್ವರಿ, ಪುತ್ರ ಮನ್ವಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page