ಮರ ಬಿದ್ದು ಮನೆಗೆ ಹಾನಿ

ಕುಂಬಳೆ: ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ, ಮಳೆ ವೇಳೆ ಮರ ಮಗುಚಿ ಬಿದ್ದು, ಮನೆಯೊಂದು ಹಾನಿಗೀಡಾಗಿದೆ. ಆರಿಕ್ಕಾಡಿ ಕುಂಡಾಪುನ ಸದಾಶಿವ ಎಂಬವರ ಸಿಮೆಂಟ್ ಶೀಟ್ ಹಾಸಿದ ಮನೆಗೆ ಹಾನಿ ಯಾಗಿದೆ.  ನಿನ್ನೆ ರಾತ್ರಿ ೧೧ ಗಂಟೆ ವೇಳೆ ಘಟನೆ ನಡೆದಿದೆ. ಸದಾಶಿವರ ಪತ್ನಿ ಹಾಗೂ ಮಕ್ಕಳು ನಿನ್ನೆ ಸಂಬಂ ಧಿಕರ ಮನೆಗೆ ತೆರಳಿದ್ದರು. ಇದರಿಂದ ಸದಾಶಿವ ಮಾತ್ರವೇ ಮನೆಯಲ್ಲಿದ್ದರು. ಮರ ಮುರಿದು ಬೀಳುವ ಶಬ್ದ ಕೇಳಿ ಅವರು ಹೊರಗೆ ಓಡಿದುದರಿಂದ ಗಾಯಗಳಿಲ್ಲದೆ ಪರಾಗಿದ್ದಾರೆ.

RELATED NEWS

You cannot copy contents of this page