ಮರ ಮುರಿದು ಬಿದ್ದು ಎರಡು ಆಟೋರಿಕ್ಷಾ, ಗೂಡಂಗಡಿಗೆ ಹಾನಿ
ಉಪ್ಪಳ: ಬೃಹತ್ ಮರ ಮುರಿದು ಬಿದ್ದು ನಿಲ್ಲಿಸಿದ್ದ ಎರಡು ಆಟೋರಿಕ್ಷಾ ಹಾಗೂ ಗೂಡಂಗಡಿ ಹಾನಿಗೊಂಡ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆ ನಯÁಬಜಾರ್ನಲ್ಲಿರುವ ತಾಲೂಕು ಆಸ್ಪತ್ರೆ ಬಳಿಯ ಸರ್ವೀಸ್ ರಸ್ತೆ ಪರಿಸರದಲ್ಲಿ ಘಟನೆ ನಡೆದಿದೆ. ಅಂಬಾರು ನಿವಾಸಿ ಮೊಯಿದೀನ್ ಹಾಗೂ ಪಾರಕಟ್ಟೆ ನಿವಾಸಿ ಅಬ್ಬಾಸ್ ಎಂಬವರ ಆಟೋರಿಕ್ಷಾ ಹಾಗೂ ದಯಾನಂದ ಎಂಬವರ ಗೂಡಂಗಡಿ ಹಾನಿಗೊಂಡಿದೆ. ಮೊಯಿದೀನ್ ರವರ ರಿಕ್ಷಾ ಪೂರ್ತಿ ನಜ್ಜುಗುಜ್ಜಾಗಿದೆ. ಜೋರಾಗಿ ಮಳೆ ಹಾಗೂ ಗಾಳಿ ಈ ವೇಳೆ ಬೀಸಿರುವುದರಿಂದ ಮರ ಮುರಿದು ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇನ್ನಿತರ ಹಲವು ಆಟೋ ರಿಕ್ಷಾ, ಬೈಕ್ ಈ ಪರಿಸರದಲ್ಲಿ ನಿಲ್ಲಿಸಲಾಗಿತ್ತು ಆದರೆ ಜನರಿಲ್ಲದ ಕಾರಣ ಅಪಾಯ ತಪ್ಪಿದೆ. ಸ್ಥಳಕ್ಕೆ ಉಪ್ಪಳ ಅಗ್ನಿಶಾಮಕ ದಳ ತಲುಪಿ ಕ್ರೆöÊನ್ ಮೂಲಕ ಮರವನ್ನು ಮೇಲೆತ್ತಿ ತೆರವುಗೊಳಿಸಲಾಗಿದೆ.