ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ಯುವಕ ಸೆರೆ
ಕಾಸರಗೋಡು: ಮಹಿಳೆಯ ಕುತ್ತಿಗೆಯಿಂದ ಒಂದೂವರೆ ಪವನ್ ತೂಕದ ಚಿನ್ನದ ಸರ ಎಗರಿಸಿ ಪರಾರಿ ಯಾದ ಯುವಕ ಸೆರೆಗೀಡಾಗಿದ್ದಾನೆ. ತಳಿಪರಂಬ ನಡುವಿಲ್ ಉತ್ತೂರು ಎಂಬಲ್ಲಿ ವಾಸಿಸುವ ಇಡುಕ್ಕಿ ಕೈಲಿಕುನ್ನಂ ಕುಂದಾಟುಕುನ್ನೇಲ್ನ ಮನುಮೋಹನನ್ (36) ಎಂಬಾತ ನನ್ನು ಆಲಕ್ಕೋಡು ಪೊಲೀಸರು ಬಂಧಿಸಿದ್ದಾರೆ. ಕಳೆದ ಬುಧವಾರ ಸಂಜೆ ಉತ್ತೂರಿನ ಪೊನ್ನಿ (67) ಎಂಬವರ ಕುತ್ತಿಗೆಯಿಂದ ಮಾಲೆ ಎಗರಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಮನುಮೋಹನ್ ಕುರಿತು ಸಂಶಯ ಹುಟ್ಟಿದೆ. ಆತ ಊರಲ್ಲಿಲ್ಲವೆಂದೂ ಮೊಬೈಲ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿತ್ತು. ಇದರಿಂದ ಆತನ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಆತ ಕಣ್ಣೂರಿನಿಂದ ವಡಗರ ಭಾಗಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ತಿಳಿದು ವಡಗರ ರೈಲ್ವೇ ನಿಲ್ದಾಣದಲ್ಲಿ ಕಾದು ನಿಂತಿದ್ದ ವೇಳ ಮದ್ಯ ಸೇವಿಸಲು ಮನುಮೋಹನ್ ರೈಲಿನಿಂದಿಳಿದಿದ್ದನು. ಈ ವೇಳೆ ಆತನನ್ನು ಸೆರೆಹಿಡಿಯಲಾಯಿತು.
ಮನುಮೋಹನ್ ಮೊದಲು ಕಾಸರಗೋಡಿನಲ್ಲೂ ಅನಂತರ ಆರಳದ ಕೆಎಸ್ಇಬಿಯಲ್ಲಿ ತಾತ್ಕಾಲಿಕ ಮೀಟರ್ ರೀಡರ್ ಆಗಿ ಕೆಲಸ ನಿರ್ವಹಿಸಿದ್ದನು. ಇಡುಕ್ಕಿಯಲ್ಲಿ ಪತ್ನಿಯೊಂದಿಗಿನ ಸಂಬಂಧ ಕಳೆದುಕೊಂಡ ಈತ ಆರಳದ ಮಹಿಳೆಯೊಂದಿಗೆ ಉತ್ತೂರಿನಲ್ಲಿ ವಾಸಿಸುತ್ತಿದ್ದರು.