ಮಾದಕವಸ್ತು ವಶ: ಬೈಕ್ ಸಹಿತ ಯುವಕ ಸೆರೆ
ಕಾಸರಗೋಡು: ಕಾಸರಗೋಡು ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಅನು ಕುಮಾರ್ ಪಿ.ಕೆ ನೇತೃತ್ವದ ಅಬಕಾರಿ ತಂಡ ಚೌಕಿ ಬಳಿ ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕವಸ್ತುವಾದ ೦.೯ ಗ್ರಾಂ ಮೆತಫಿಟಮಿನ್ನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಈ ಸಂಬಂಧ ಚೆರ್ಕಳ ಸಮೀಪದ ಸಿಟಿಜನ್ನಗರ ಪೊಡಿಪಳ್ಳದ ಮೊಹ ಮ್ಮದ್ ಸಜಾದ್ ಎಂ ಜಿ (೨೩) ಎಂಬಾ ತನನ್ನು ಸೆರೆಹಿಡಿದು ಪ್ರಕರಣ ದಾಖಲಿ ಸಲಾಗಿದೆ. ಈತ ಚಲಾಯಿಸುತ್ತಿದ್ದ ಬೈಕ್ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂ ಟೀವ್ ಆಫೀಸರ್ ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ರಾಜೇಶ್ ಪಿ, ಶರತ್ ಕೆ.ಪಿ, ಅತುಲ್ ಟಿ ವಿ ಎಂಬವರು ಒಳಗೊಂಡಿದ್ದರು.