ಮುಮ್ತಾಜ್, ನಾರಾಯಣ್‌ರಿಗೆ ರೋಟರಿ ರಾಷ್ಟ್ರ ಬಿಲ್ಡರ್ ಪ್ರಶಸ್ತಿ

ಕಾಸರಗೋಡು: ಮೂಲ ಶಿಕ್ಷಣ ಅಭಿಯಾನದ ಅಂಗವಾಗಿ ರೋಟರಿ ಇಂಟರ್ ನ್ಯಾಷನಲ್ ವತಿಯಿಂದ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿಯ ರಾಷ್ಟ್ರ ನಿರ್ಮಾತ್ಯ ಪ್ರಶಸ್ತಿಯನ್ನು ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾ ಧ್ಯಾಯರಾದ ಕೆ. ನಾರಾಯಣನ್ ಮತ್ತು ನಾಯಮ್ಮಾರ್‌ಮೂಲೆ ಐ.ಟಿ.ಎಚ್.ಎಸ್.ಎಸ್.ನ ಸಮಾಜ ವಿಜ್ಞಾನ ಶಿಕ್ಷಕಿ ಎಂ.ಎ. ಮುಮ್ತಾಜ್‌ರಿಗೆ ವಿತರಿಸಲಾಯಿತು.

ಪಠ್ಯ ಮತ್ತು ಪಠ್ಯೇತರ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಶ್ರೇಷ್ಠತೆಗಾಗಿ ಈ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಪ್ರಶಸ್ತಿಗೆ ಭಾಜನರಾದ ಕೆ. ನಾರಾಯಣನ್ ರಾಜ್ಯ ಗಣಿತ ಶಿಕ್ಷಕರ ಸಂಪನ್ಮೂಲ ಗುಂಪಿನ ಮಾಸ್ಟರ್ ಟ್ರೈನರ್ ಹಾಗೂ ಜಿಲ್ಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನ- ಶಿಕ್ಷಕ ತರಬೇತುದಾರರೂ ಆಗಿದ್ದಾರೆ. ಇನ್ನು ಎಂ.ಎ. ಮುಮ್ತಾಜ್ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖರಾಗಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಕಾರ್ಯಕರ್ತೆ ಮತ್ತು ಕವ ಯಿತ್ರಿಯೂ ಆಗಿದ್ದಾರೆ. ಪ್ರವಾಸ ಕಥನ ಸೇರಿದಂತೆ ನಾಲ್ಕು ಪುಸ್ತಕಗಳ ಲೇಖಕಿಯೂ ಆಗಿದ್ದಾರೆ.

ಕಾಸರಗೋಡು ರೋಟರಿ ಕುಟುಂಬ ಸಮ್ಮಿಲನ ಹಾಗೂ ಓಣೋತ್ಸವ ಕಾರ್ಯಕ್ರಮದಲ್ಲಿ ಈ ಇಬ್ಬರಿಗೆ ಪ್ರಶಸ್ತಿ ಪ್ರಧಾನಗೈ ಯ್ಯಲಾಯಿತು. ರೋಟರಿ ಅಧ್ಯಕ್ಷ ಡಾ. ಬಿ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದರು. ಸುಚಿತ್ರಾ ಪಿಳ್ಳೆ, ಮುಖ್ಯ ಅತಿಥಿಯಾಗಿ ಭಾಗವಹಿ ಸಿದರು. ರಾಷ್ಟ್ರ ನಿರ್ಮಾಣ ಪ್ರಶಸ್ತಿ  ಸಮಿತಿ ಅಧ್ಯಕ್ಷ ಎ.ಸಿ. ಜೋಶಿ, ಡಾ. ಎಂ.ಎಸ್. ಶ್ರೀಧರ್ ರಾವ್, ರೋಟರಿ ಮಹಿಳಾ ವೇದಿಕೆ ಕಾರ್ಯದರ್ಶಿ ಅಶ್ವಿನಿ ವರದರಾಜ್, ಎಂ.ಟಿ. ದಿನೇಶ್, ಪಿ.ವಿ. ಗೋಕುಲ್ ಚಂದ್ರಬಾಬು, ಡಾ. ಜ್ಯೋತಿ ಎಸ್. ಮೊದಲಾದವರು ಮಾತನಾಡಿದರು. ಸಾವಯವ ಕೃಷಿ ಪ್ರಶಸ್ತಿ ವಿಜೇತ ಡಾ. ಯು.ಎಸ್. ಭಟ್‌ರನ್ನು ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಹರಿಕೃಷ್ಣ ನಂಬ್ಯಾರ್ ಸನ್ಮಾನಿಸಿದರು. ರೋಟರಿ ಮಹಿಳಾ ವೇದಿಕೆ ಅಧ್ಯಕ್ಷೆ ಸಿ. ಬಿಂದು ಸ್ವಾಗತಿಸಿ, ಕ್ಲಬ್ ಕಾರ್ಯದರ್ಶಿ ಕೆ. ಹರಿಪ್ರಸಾದ್ ವಂದಿಸಿದರು. ಮಹಿಳಾ ವೇದಿಕೆಯ ನೇತೃತ್ವದಲ್ಲಿ ತಿರುವಾದಿರಕ್ಕಳಿ, ಸಂಗೀತ ಕಾರ್ಯಕ್ರಮ ಹಾಗೂ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page