ಮೋದಿ ಸರಕಾರ ಉರುಳಿಸಲು ಅಮೆರಿಕದ ಸಿ.ಐ.ಎ ತಂತ್ರ
ನವದೆಹಲಿ: ಬಾಂಗ್ಲಾ ದೇಶದ ಸರಕಾರವನ್ನು ಉರುಳಿಸಿದ ಅದೇ ರೀತಿಯಲ್ಲಿ ಭಾರತದ ನರೇಂದ್ರಮೋದಿ ನೇತೃತ್ವದ ಸರಕಾರವನ್ನೂ ಉರುಳಿಸಲು ಅಮೆರಿಕದ ಗೂಡಚರ್ಯೆ ವಿಭಾಗವಾದ ಸಿಐಎ ತೆರೆಮರೆಯಲ್ಲಿ ಭಾರೀ ಪ್ರಯತ್ನ ನಡೆಸುತ್ತಿರುವುದು ಈಗ ಬಯಲಾಗಿದೆ. ರಷ್ಯಾದ ಸರಕಾರಿ ಮಾಧ್ಯಮ ಸ್ಪುಟ್ನಿಕ್ ಅಮೆರಿಕದ ಇಂತಹ ಕುತಂತ್ರವನ್ನು ತನ್ನ ವರದಿಯಲ್ಲಿ ಬಯಲುಪಡಿಸಿದೆ.
ಪ್ರಧಾನಮಂತ್ರಿ ನರೇಂದ್ರಮೋದಿ ಜಾಗತಿಕ ನಾಯಕರಾಗಿ ಇಂದು ಬೆಳೆದುನಿಂತಿದ್ದಾರೆ. ಮೋದಿ ಮಾತನ್ನು ಜಗತ್ತಿನ ಬಹುತೇಕ ಎಲ್ಲಾ ದೇಶಗಳೂ ಕೇಳುತ್ತಿವೆ. ಯಾವುದೇ ವಿದೇಶ ಶಕ್ತಿಗೆ ಭಾರತ ಮಣಿಯುವುದಿಲ್ಲ. ವಿರೋಧದ ನಡೆವೆಯೂ ಭಾರತ ರಷ್ಯಾದಿಂದ ತೈಲ ಸೇರಿದಂತೆ ಇತರ ಹಲವು ಸಾಮಗ್ರಿಗಳನ್ನು ಖರೀದಿಸುತ್ತಿದೆ. ಅದೂ ಸೇರಿದಂತೆ ಭಾರತದ ವಿದೇಶಾಂಗ ನೀತಿಗೆ ಅಮೆರಿಕಾ ಸೇರಿದಂತೆ ಕೆಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದ್ದರಿಂದ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲವೆಂಬ ಕಾರಣಕ್ಕೆ ಮೋದಿ ಸರಕಾರವನ್ನು ಉರುಳಿಸಲು ಸಿ.ಐ.ಎ ತೆರೆಮರೆಯಲ್ಲಿ ಭಾರೀ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಚಂದ್ರಬಾಬು ನಾಯ್ಡುರ ನೆರವಿನೊಂದಿಗೆ ಕೆಲವು ಮತೀಯ ಸಂಘಟನೆಗಳೊಂದಿಗೆ ಸೇರಿ ಮೋದಿ ಸರಕಾರವನ್ನು ಉರುಳಿಸಲು ಅಮೆರಿಕ ಭಾರೀ ಸಂಚು ರೂಪಿಸಿದೆಯೆಂದು ರಷ್ಯಾದ ಸರಕಾರಿ ಮಾಧ್ಯಮ ಮುನ್ನೆಚ್ಚರಿಕೆ ನೀಡಿದೆ. ರಶ್ಯಾದ ಮಾಧ್ಯಮ ಹೇಳಿದಂತೆ ಮೋದಿ ಸರಕಾರದ ವಿರುದ್ಧ ವಿಪಕ್ಷಗಳು ಶೀಘ್ರ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಸಾಧ್ಯತೆ ಇದೆ. ಇದಕ್ಕಾಗಿ ಭಾರೀ ಪ್ರಯತ್ನ ನಡೆಸಲಾಗುತ್ತಿದೆ. ಮಾತ್ರವಲ್ಲ ವಿಪಕ್ಷಗಳ ಕೆಲವು ನಾಯಕರೊಂದಿಗೆ ಸಿಐಎ ನಿರಂತರ ಸಂಪರ್ಕದಲ್ಲಿದೆ. ಮಾತ್ರವಲ್ಲ ಕೆಲವು ವಿಪಕ್ಷ ನಾಯಕರನ್ನು ನೇರವಾಗಿ ಭೇಟಿಯಾಗಿ ಅವರೊಂದಿಗೆ ಸಿಐಎ ಗುಪ್ತ ಸಮಾಲೋಚನೆಯನ್ನು ನಡೆಸಿದೆ. ಇದು ಮಾತ್ರವಲ್ಲದೆ ಅಮೆರಿಕದ ಕಾನ್ಸುಲೇಟ್ ಜನರಲ್ ಜೆನ್ನಿಫರ್ ಲಾರ್ಸನ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಎಐಎಂಐಎಂ ನಾಯಕ ಅಸಾದು ದ್ದೀನ್ ಒವೈಸಿ ರನ್ನು ಭೇಟಿಯಾಗಿ ದ್ದರು. ಅದಕ್ಕೆ ಮೊದಲು ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಮತ್ತು ತೆಲಂಗಾನ ಮುಖ್ಯಮಂತ್ರಿ ರೇವಂತ್ ರೆಡ್ಡಿಯವ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದು ಮಾತ್ರವಲ್ಲದೆ ಕೆಲವು ಮತೀಯ ನಾಯಕರೊಂದಿಗೂ ಸಿಐಎ ಗುಪ್ತ ಚರ್ಚೆ ನಡೆಸಿದೆ.
ಮೋದಿ ಸರಕಾರವನ್ನು ಉರುಳಿಸಲು ಸಾಮಾಜಿಕ ಕಾರ್ಯಕರ್ತರು, ಸೋಶ್ಯಲ್ ಮೀಡಿಯ ಪತ್ರಕರ್ತರು, ಉದ್ಯಮಿಗಳು ಮತ್ತು ಸೆಲಿಬ್ರಿಟೀಸ್‌ಗಳೂ ಸೇರಿದಂತೆ ಹಲವರನ್ನು ವ್ಯವಸ್ಥಿತವಾಗಿ ಈ ಕಾರ್ಯಗಳಿಗೆ ಸಿಐಎ ಬಳಸುತ್ತಿರುವುದಾಗಿಯೂ ರಷ್ಯಾ ಹೇಳಿದೆ.