ಯುವಕನನ್ನು ಅಪಹರಿಸಿದ ಪ್ರಕರಣ: ಆರೋಪಿ ಸೆರೆ
ಕಾಸರಗೋಡು: ಯುವಕನನ್ನು ಅಪಹರಿಸಿದ ಪ್ರಕರಣದ ಆರೋಪಿ ಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಅಡ್ಕ ವೀರನಗರದ ಅಬ್ದುಲ್ ಲತೀಫ್ (27) ಬಂಧಿತ ಆರೋಪಿ. ಮೊಗ್ರಾಲ್ ಪುತ್ತೂರಿನ ಹನೀಫ್ ಎಂಬಾತನನ್ನು ಅಪಹರಿಸಿ 2 ಲಕ್ಷ ರೂನೀಡುವಂತೆ ಬೆದರಿಸಿ ಆತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಕಸಿದಿರುವು ದಾಗಿ ಜೂನ್ 11ರಂದು ಕಾಸರ ಗೋಡು ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಪೊಲೀಸರು ಅಬ್ದುಲ್ ಲತೀಫ್ನ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದು, ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳಲ್ಲೂ ಕೇಸುಗಳಿವೆ.