ಯುವಕ ನಾಪತ್ತೆ: ತನಿಖ ತೀವ್ರ
ಕಾಸರಗೋಡು: ತೃಕ್ಕರಿಪುರ ನಡಕ್ಕಾವ್ ನಿವಾಸಿ ಸುನಿಲ್ ಕುಮಾರ್ (41) ಎಂಬವರು ಕಳೆದ ಮಾರ್ಚ್ ೩ರಿಂದ ನಾಪತ್ತೆಯಾಗಿದ್ದು, ಇವರ ಪತ್ತೆಗಾಗಿ ಚಂದೇರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಂದು ಸಂಜೆ ೬.೩೦ಕ್ಕೆ ಕೆಎಲ್೫೯ಜಿ ೫೯೯೧ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಹೊರಟು ಹೋದವರು ಹಿಂತಿರುಗಲಿಲ್ಲವೆಂದು ದೂರು ನೀಡಲಾಗಿತ್ತು. ಇವರ ಬಗ್ಗೆ ಮಾಹಿತಿ ಲಭ್ಯವಾದರೆ 9497927833 ಎಂಬ ನಂಬ್ರ ದಲ್ಲಿ ಸೂಚಿಸಲು ತನಿಖಾಧಿಕಾರಿ ತಿಳಿಸಿದ್ದಾರೆ.