ಯುವತಿ ನಾಪತ್ತೆ
ಕುಂಬಳೆ:ಯುವತಿಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೆರುವಾಡ್ ನಿವಾಸಿ ಶಾಫಿ ಎಂಬವರ ಪತ್ನಿ ಫಾತಿಮತ್ ಸುಹರಾ (೨೫) ನಾಪತ್ತೆಯಾದ ಯುವತಿ. ನಿನ್ನೆ ಬೆಳಿಗ್ಗಿನಿಂದ ಇವರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಸಂಜೆವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರ ಮುನೀರ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.