ಯುವಮೋರ್ಛಾ ಮುಖಂಡ ರಾಜೇಶ್ ಕುಟ್ಟ ಬಂಬ್ರಾಣ ಸಂಸ್ಮರಣೆ
ಉಪ್ಪಳ: ಬಿಜೆಪಿ, ಯುವ ಮೋರ್ಛಾ ಉಪಾಧ್ಯಕ್ಷರಾಗಿದ್ದ ರಾಜೇಶ್ ಕುಟ್ಟ ಬಂಬ್ರಾಣ ಅವರ ದ್ವಿತೀಯ ಪುಣ್ಯ ಸ್ಮರಣೆ ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಪಕ್ಷದ ಕುಂಬಳೆ ಕಚೇರಿಯಲ್ಲಿ ನಡೆಸಲಾಯಿತು. ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಉಪಾಧ್ಯಕ್ಷೆ ಪ್ರೇಮಾವತಿ, ಕಾರ್ಯದರ್ಶಿ ಪ್ರದೀಪ್ ಕುಮಾರ್, ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಪಂಚಾಯತ್ ಸದಸ್ಯ, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.