ರಸ್ತೆಗೆ ಆವರಿಸಿಕೊಂಡಿರುವ ಪೊದೆಗಳು ವಾಹನ ಸವಾರರಲ್ಲಿ ಆತಂಕ
ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರುಪದವ್-ಧರ್ಮತ್ತಡ್ಕ, ಸರ್ಕುತ್ತಿ ಕನಿಯಾಲ, ಬಳ್ಳೂರು ರಸ್ತೆಗಳ ವಿವಿಧೆಡೆ ಇಕ್ಕೆಡೆಗಳಲ್ಲಿ ಮರದ ರೆಂಬೆ ಹಾಗೂ ಪೊದೆಗಳು ರಸ್ತೆಗೆ ಆವರಿಸಿ ಬಸ್ ಸಹಿತ ವಾಹನ ಸಂಚಾರಕ್ಕೆ ಆತಂಕ ಉಂಟಾಗುತ್ತಿರುವುದಾಗಿ ವಾಹನ ಸವಾರರು ದೂರಿದ್ದಾರೆ. ಈ ದಾರಿ ಯಲ್ಲಿ ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಎದುರಿನಿಂದ ಬರುವ ವಾಹನಗಳಿಗೆ ಸೈಡು ನೀಡಲು ಪೊದೆಗಳು ಅಡ್ಡಿಯÁಗುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಬದಿ ಬೃಹತ್ ಹೊಂ ಡವಿದೆ. ಇದು ಅಪಾಯಕ್ಕೆ ಕಾರಣ ವಾಗುತ್ತಿರುವುದಾಗಿ ಸವಾರರು ತಿಳಿಸಿ ದ್ದಾರೆ. ಲೊಕೋಪಯೋಗಿ ಇಲಾ ಖೆಗೆ ಹಾಗೂ ಪಂಚಾ ಯತ್ಗೆ ಸೇರಿದ ರಸ್ತೆಗಳು ಒಳಗೊಂ ಡಿದೆ. ಸರ್ಕುತ್ತಿ ಕನಿಯಾಲ ಮಧ್ಯೆ ಕೆಲವು ಕಡೆಗಳಲ್ಲಿ ಸ್ಥಳಿಯರು ಸೇರಿ ಪೊದೆ ಗಳನ್ನು ಕಡಿದು ಶುಚೀಕರಣ ಗೊಳಿಸಿದ್ದಾರೆ. ಇನ್ನೂ ಬಾಕಿಯಿ ರುವ ಪೊದೆಗಳನ್ನು ಸಂಪೂರ್ಣ ಕಡಿದು ಶುಚೀಕರಿಸಿ ವಾಹನ ಸಂಚಾರವನ್ನು ಸುಗಮವಾಗಿಸ ಬೇಕೆಂದು ವಾಹನ ಸವಾರರು, ಸಿಬಂದಿಗಳು ಒತ್ತಾಯಿಸಿದ್ದಾರೆ.