ರಸ್ತೆ ಅಪಘಾತದ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ : ಕೇಂದ್ರ ಸರಕಾರದ ಮಹತ್ವದ ಘೋಷಣೆ

ನವದೆಹಲಿ: ವಾಹನ ಅಪಘಾತದಲ್ಲಿ ಗಾಯಗೊಳ್ಳುವವರಿಗೆ ನಗದು ರಹಿತ (ಕ್ಯಾಶ್‌ಲೆಸ್) ಚಿಕಿತ್ಸೆ ನೀಡುವ ಹೊಸ ಘೋಷಣೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತುಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೊರಡಿಸಿದ್ದಾರೆ.

ನಗದು ರಹಿತ ಚಿಕಿತ್ಸೆ ಉಪಕ್ರಮ ಗಳನ್ನು ಪ್ರಾಯೋಗಿಕವಾಗಿ ಕೆಲವು ರಾಜ್ಯಗಳಲ್ಲಿ ಈಗಾಗಲೇ ಜ್ಯಾರಿಗೊಳಿಸ ಲಾಗಿದ. ಅಲ್ಲಿ ಅದು ಯಶಸ್ವಿಯಾಗಿದ್ದು, ಈಗ ಅದನ್ನು ದೇಶವ್ಯಾಪಿ ವಿಸ್ತರಿಸಲಾ ಗಿದೆಯೆಂದು ಸಚಿವರು ತಿಳಿಸಿದ್ದರೆ.

ಈ ಹೊಸ ಯೋಜನೆಯಂತೆ ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಲಭಿಸಲು ಅಪಘಾತ ಸಂಭವಿಸಿದ 28 ಗಂಟೆಯೊಳಗಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ಅದಾದ ಕೂಡಲೇ ನಗದು ರಹಿತ ಚಿಕಿತ್ಸಾ ಸೌಲಭ್ಯ ರಸ್ತೆ ಅಪಘಾತದ ಸಂತ್ರಸ್ತರಿಗೆ ಲಭಿಸುವುದು. ಈ ಯೋಜನೆ ಪ್ರಕಾರ ಅಪಘಾತದಲ್ಲಿ ಗಾಯಾಳುಗಳಿಗೆ  7 ದಿನಗಳ ಚಿಕಿತ್ಸಾ ವೆಚ್ಚ ಕೇಂದ್ರ ಸರಕಾರ ಭರಿಸಲಿದೆ. ಇದರಂತೆ ಗರಿಷ್ಠ ೧.೫ ಲಕ್ಷ ರೂ.ಗಳ ಚಿಕಿತ್ಸಾ ಸಹಾಯ ಲಭಿಸಲಿದೆ.

ಹಿಟ್ ಆಂಡ್ ರನ್ ಅಥವಾ ವಾಹನ ಗುದ್ದಿ ಓಡಿದ ಕೇಸುಗಳಲ್ಲಿ ಅಪಘಾತಕ್ಕೊಳಗಾದ ಸಂತ್ರಸ್ತರು ಮೃತಪಟ್ಟರೆ ಆಗ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ. ಪರಿಹಾರಧನ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಯೋಜನೆಯನ್ನು ಪ್ರಯೋ ಗಾರ್ಥವಾಗಿ ಅನುಷ್ಠಾನಗೊಳಿಸುವ ಹಂತದಲ್ಲಿ ಕೆಲವೊಂದು ಲೋಪದೋ ಷಗಳನ್ನು ಗಮನಿಸಲಾಗಿತ್ತು. ಅವುಗಳನ್ನು ಸರಿಪಡಿಸಿಕೊಂಡು ಉಪಕ್ರಮಗಳನ್ನು ಸುಧಾರಿಸುವ ಕ್ರಮ ಕೈಗೊಳ್ಳಲಾಗಿದೆ. 

2024ರಲ್ಲಿ ರಸ್ತೆ ಅಪಘಾತದಲ್ಲಿ ದೇಶದಲ್ಲಿ 1.8 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 30,000 ಮಂದಿ ಹೆಲ್ಮೆಟ್ ಧರಿಸದೆ  ದ್ವಿಚಕ್ರ ವಾಹನ ಚಲಾಯಿಸಿದ ವೇಳೆ ಉಂಟಾದ ಅಪಘಾತದಲ್ಲಿ ಸಾವನ್ನಪ್ಪಿದವರಾಗಿದ್ದ್ದಾರೆ.  ಈ ರೀತಿ ಮಾರಣಾಂತಿಕ ಅಪಘಾತ ಗಳಿಗೆ ಬಲಿಯಾದವರಲ್ಲಿ ಶೇ. 66ರಷ್ಟು ಮಂದಿ 18ರಿಂದ 34ರ ಮಧ್ಯಪ್ರಾಯ ದವರಾಗಿದ್ದಾರೆ. ಶಾಲೆ  ಮತ್ತು ಕಾಲೇ ಜುಗಳ ಪ್ರವೇಶ ಮತ್ತು ನಿರ್ಗಮ ಸ್ಥಳದಲ್ಲಿ 10,000 ಮಕ್ಕಳು ಮೃತಪಟ್ಟಿದ್ದಾರೆ. ಆದ್ದರಿಂದ ನಮ್ಮ ಪ್ರಮುಖ ಆದ್ಯತೆ ರಸ್ತೆ ಸುರಕ್ಷತೆಯಾಗಿದೆಯೆಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page