ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಕೆ

ತಿರುವನಂತಪುರ: ರಾಜ್ಯದಲ್ಲಿ ಎಚ್ಐವಿ (ಏಡ್ಸ್) ಸೋಂಕಿತರ ಸಂಖ್ಯೆಯಲ್ಲಿ ಪ್ರತೀ ವರ್ಷ ಇಳಿಕೆಯಾಗುತ್ತಿರುವುದಾಗಿ ರಾಜ್ಯ ಆರೋಗ್ಯ ಇಲಾಖೆಯ ಲೆಕ್ಕಾಚಾರಗಳು ಸೂಚಿಸುತ್ತಿವೆ.
2006ರಲ್ಲಿ ರಾಜ್ಯದಲ್ಲಿ 3972 ಎಚ್ಐವಿ ಸೋಂಕಿತರಿದ್ದರು. ಇದು ವರ್ಷವೊಂದರಲ್ಲಿ ದಾಖಲಿಸಲಾದ ಎಚ್ಐವಿ ಸೋಂಕಿತರ ಗರಿಷ್ಠ ಸಂಖ್ಯೆಯಾಗಿತ್ತು. ಅದು ವರ್ಷವೊಂದರಲ್ಲಿ ದಾಖಲಿಸಲಾದ ಎಚ್ಐವಿ ಸೋಂಕಿತರ ಗರಿಷ್ಠ ಸಂಖ್ಯೆಯಾಗಿತ್ತು. ಅಂದು ರಾಜ್ಯದಲ್ಲಿ ಒಟ್ಟಾರೆಯಾಗಿ 1.5 ಲಕ್ಷ ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. 2012ರ ಬಳಿಕ ಎಚ್ಐವಿ ಪೋಸಿಟಿವ್ ಸೋಂಕಿತರ ಸಂಖ್ಯೆ ವರ್ಷಕ್ಕೆ 200ಕ್ಕಿಂತಲೂ ಕೆಳಗೆ ಇಳಿಯತೊಡಗಿದೆ ಎಂದು ಆರೋಗ್ಯ ಇಲಾಖೆಯ ಲೆಕ್ಕಾಚಾರಗಳು ಸೂಚಿಸುತ್ತಿವೆ.
ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 100ರಷ್ಟು ಮಂದಿ ಎಚ್ಐವಿ ಸೋಂಕಿತರಾಗುತ್ತಿದ್ದಾರೆ. ಇದರಲ್ಲಿ ಬಹುಪಾಲು ಮಂದಿ ಕೇರಳದಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರೇ ಆಗಿದ್ದಾರೆಂದು ಕೆಎಸ್ಎಸಿಎಸ್ ಪ್ರೊಜೆಕ್ಟ್ ನಿರ್ದೇಶಕ ಡಾ| ಆರ್. ಶ್ರೀಲತ ಹೇಳಿದ್ದಾರೆ. ಮಾದಕದ್ರವ್ಯ ವ್ಯಸನವೇ ಎಚ್ಐವಿ ಸೋಂಕು ಹರಡಲು ಹೆಚ್ಚಾಗಿ ಕಾರಣವಾಗುತ್ತಿದೆ. ಅದನ್ನು ತಡೆಗಟ್ಟುವುದರ ಜೊತೆಗೆ ಈ ರೋಗದ ಬಗ್ಗೆ ಜನರಲ್ಲಿ ನಿರಂತರ ಅರಿವು ಮೂಡಿಸುವ ಕೆಲಸವನ್ನು ನಡೆಸಬೇಕಾಗಿದೆ. ಲೈಂಗಿಕ ವೃತ್ತಿಯಲ್ಲಿ ತೊಡಗಿದವರಲ್ಲಿ ಏಡ್ಸ್ ರೋಗ ತಗಲುವಿಕೆ ಇತ್ತೀಚೆಗಿನಿಂದ ಗಣನೀಯ ರೀತಿಯ ಕುಸಿತ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page