ರಾಜ್ಯದಲ್ಲಿ ಲೋನ್-ಆಪ್ ವಂಚನೆ: ನಾಲ್ವರ ಸೆರೆ; ಒಂದು ವರ್ಷದಲ್ಲಿ ನಷ್ಟಗೊಂಡಿರುವುದು ೨೦೧ ಕೋಟಿ ರೂ.
ಕಾಸರಗೋಡು: ಲೋನ್ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ಬಳಿಕ ವಂಚನೆಗೈಯ್ಯುವ ಜಾಲವನ್ನು ಭೇದಿಸಿ ನಾಲ್ವರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಲೋನ್ ಆಪ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಸೆರೆಗೊಳಗಾಗುತ್ತಿರು ವುದು ರಾಜ್ಯದಲ್ಲಿ ಇದೇ ಮೊದಲ ಬಾರಿಯಾಗಿದೆ. ಗುಜರಾತ್ ನಿಂದ ಆರೋಪಿಗಳನ್ನು ಬಂಧಿಸಲಾಗಿದೆ.
ಗುಜರಾತ್ ಅಮರೇಲಿ ನಿವಾಸಿ ಗಳಾದ ಖೆರಾನಿ ಸಮೀರ್ ಭಾ (೩೦), ಕಲ್ವತ್ತರ್ ಮೊಹಮ್ಮದ್ ಫರೀಜ್ (೨೦), ಅಲಿ ಅಜಿತ್ ಭಾ (೪೩) ಮತ್ತು ಪ್ರಾಯಪೂರ್ತಿಯಾಗದ ಓರ್ವ ಸೇರಿದಂತೆ ಒಟ್ಟು ನಾಲ್ವರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ವಯನಾಡ್ ಜಿಲ್ಲೆಯ ಮಾನಂತವಾಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪಿ.ಜೆ. ಕುರ್ಯಾಕೋಸ್ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ವಯನಾಡು ಜಿಲ್ಲೆಯ ವೊತ್ತಡಿ ತಾಳೆಮುಂಡ ನಿವಾಸಿ ಸಿ.ಎಸ್. ಅಜೆಯ್ರಾಜ್ (೪೪) ಎಂಬವರಿಗೆ ಕ್ಯಾಂಡಿಕ್ಯಾಶ್ ಎಂಬ ಹೆಸರಿನ ನಕಲಿ ಆಪ್ ಮೂಲಕ ಸಾಲ ನೀಡು ವುದಾಗಿ ವಂಚನೆಗಾರರು ಸುಳ್ಳು ಭರವಸೆ ನೀಡಿದ್ದರು. ಆದರೆ ಸಾಲ ಪಡೆಯಲು ಅಜೆಯ್ ತಯಾರಾಗ ದಾಗ ಈ ವಂಚನೆ ಜಾಲದವರು ಅಜೆಯ್ರ ಫೋನ್ ಮಾತ್ರವಲ್ಲ ಅವರ ಸ್ನೇಹಿತರು ಮತ್ತು ಸಂಬಂಧಿಕರ ಮೊಬೈಲ್ ಫೋನ್ಗಳನ್ನು ಹ್ಯಾಕ್ ಮಾಡಿ ಬೆದರಿಕೆಯೊಡ್ಡತೊಡಗಿದ್ದರು. ಅದರಿಂದ ಮನನೊಂದ ಅಜೆಯ್ ಕಳೆದ ಸೆಪ್ಟಂಬರ್ ೧೫ರಂದು ಆತ್ಮ ಹತ್ಯೆಗೈದಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಈ ಆರೋಪಿಗಳನ್ನು ಬಂಧಿಸಲಾಗಿದೆ.
ಇಂತಹ ನಕಲಿ ಲೋನ್ ಆಪ್ ಜಾಲದವರ ವಂಚನೆಯಲ್ಲಿ ಸಿಲುಕಿಕೊಂಡು ಎರ್ನಾಕುಳಂ ಕಡಮಕುಡಿ ಮಾಡಶ್ಶೇರಿ ವೀಡ್ನ ನಿಜೋ ಅವರ ಪತ್ನಿ ಶಿಲ್ಪಾ ಮತ್ತು ಈ ದಂಪತಿಯ ಏಳು ಮತ್ತು ಐದು ವರ್ಷದ ಇಬ್ಬರು ಮಕ್ಕಳಾದ ಎಯ್ಬನ್ ಮತ್ತು ಆರೋನ್ ಎಂಬವರು ೨೦೨೩ ಸೆಪ್ಟಂಬರ್ ೧೨ರಂದು ಆತ್ಮ ಹತ್ಯೆಗೈದಿದ್ದರು. ಇದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ಅದೆಷ್ಟೋ ಮಂದಿ ವಂಚನೆಗೊಳಗಾಗಿದ್ದಾರೆ. ಹೀಗೆ ಲೋನ್ ಆಪ್ ಮೂಲಕ ಕಳೆದ ವರ್ಷ ಮಾತ್ರವಾಗಿ ಇಂತಹ ವಿವಿಧ ವಂಚನಾ ಜಾಲದವರು ರಾಜ್ಯದ ವಿವಿಧ ಜಿಲ್ಲೆಗಳಿಂದಾಗಿ ಅಂದಾಜು ೨೦೧ ಕೋಟಿ ರೂ.ಗಳಷ್ಟು ಲಪಟಾ ಯಿಸಿದ್ದಾರೆ. ಇದರಲ್ಲಿ ೪೦ ಕೋಟಿ ರೂ.ವನ್ನು ತಡೆಗಟ್ಟುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಹೀಗೆ ಲೋನ್ ಆಪ್ನಿಂದ ವಂ ಚನೆಗೊಳಗಾದ ಬಗ್ಗೆ ರಾಜ್ಯದಾ ದ್ಯಂತವಾಗಿ ೩,೭೩೭ ದೂರುಗಳು ಪೊಲೀಸರಿಗೆ ಲಭಿಸಿದೆ. ಹೀಗೆ ವಂಚನೆ ನಡೆಸುತ್ತಿರುವ ೧೯೨ ಆಪ್ಗಳನ್ನು ಪೊಲೀಸರು ಬ್ಲೋಕ್ ಮಾಡಿದ್ದಾರೆ. ಇಂತಹ ಅತೀ ಹೆಚ್ಚು ಪ್ರಕರಣಗಳು ತಿರುವನಂತಪುರ ಜಿಲ್ಲೆಯಲ್ಲಿ ದಾಖಲಾಗಿದೆ.