ರಾಜ್ಯದಲ್ಲಿ ೨.೭೦ ಕೋಟಿ ಮತದಾರರು: ಮಹಿಳೆಯರದ್ದೇ ಮೇಲುಗೈ
ಕಾಸರಗೋಡು: ಲೋಕಸಭಾ ಚುನಾವಣೆ ಎಪ್ರಿಲ್ ೧೬ರಿಂದ ಆರಂಭಗೊಳ್ಳುವ ನಿರೀಕ್ಷೆಯಿದ್ದು ಅದಕ್ಕೆ ಹೊಂದಿಕೊಂಡು ಕೇಂದ್ರ ಚುನಾವಣಾ ಆಯೋಗ ಮತದಾರ ಯಾದಿ ಪ್ರಕಟಿಸಿದೆ. ಇದರಂತೆ ರಾಜ್ಯದಲ್ಲಿ ೨.೭೦ ಕೋಟಿ ಮತದಾರರಿದ್ದು, ಅದರಲ್ಲಿ ಮಹಿಳೆಯರೇ ಪ್ರಾಬಲ್ಯ ಪಡೆದಿದ್ದಾರೆ.
ರಾಜ್ಯದಲ್ಲಿ ೨,೭೦,೯೯,೩೨೬ ಮತದಾರರಿದ್ದು ಅದರಲ್ಲಿ ಗಂಡಸರು ೧,೩೧,೦೨,೨೮೮, ಮಹಿಳೆಯರು ೧,೩೯,೯೬,೭೨೯ ಮಂಗಳಮುಖಿ ಯರು ೩೦೯, ವಿಕಲಚೇತನರು ೨,೬೨,೨೧೩, ಯುವ ಮತದಾರರು (೧೮ರಿಂದ ೧೯ರ ಮಧ್ಯೆ ಪ್ರಾಯದವರು) ೨,೮೮,೫೩೩, ಹಿರಿಯ ನಾಗರಿಕರು (೬೦ ವರ್ಷ ದಾಟಿದವರು) ೬,೫೯,೨೨೭, ಅನಿವಾಸಿ ಕೇರಳೀಯರು ೮೮,೨೨೮ ಒಳಗೊಂಡಿದ್ದಾರೆ. ಮಹಿಳೆಯರು ಮತ್ತು ಪುರುಷರ ಅನುಪಾತ ೧೦೬೮ಃ೧೦೦ ಆಗಿದೆ. ಗಂಡಸರಿಗಿಂತ ೧೬,೩೮,೯೭೧ ಹೆಚ್ಚು ಮಹಿಳಾ ಮತದಾರರಿದ್ದಾರೆ.
ಸಾವನ್ನಪ್ಪಿದವರು, ಬೇರೆಡೆ ವಲಸೆ ಹೋದವರು ಮತ್ತು ಇಮ್ಮಡಿ ಮತದಾನ ಹಕ್ಕು ಹೊಂದಿದ ೩.೭೫ ಲಕ್ಷ ಮಂದಿಯನ್ನು ಮತದಾರ ಯಾದಿಯಿಂದ ಹೊರತುಪಡಿಸಲಾಗಿದೆ.
ವೋಟರ್ಸ್ ಪೋರ್ಟಲ್ ನಿಂದ ಮತ್ತು ವೋಟರ್ಸ್ ಹೆಲ್ಪ್ಲೈನ್ ಆಪ್ನಿಂದ ಹೊಸ ಗುರುತು ಚೀಟಿ ಡೌನ್ ಲೋಡ್ ಮಾಡಿ ಉಪಯೋಗಿಸುವ ಸೌಕರ್ಯವನ್ನು ಚುನಾವಣಾ ಆಯೋಗ ಒದಗಿಸಿದೆ.
ಮತದಾನ ನಡೆಸುವ ಮೊದಲು ೧೮ ವರ್ಷ ಪೂರ್ಣಗೊಂಡವರು ಮತದಾರ ಯಾದಿಯಲ್ಲಿ ಹೆಸರು ನೋಂದಾಯಿಸುವ ಸೌಕರ್ಯವನ್ನು ಏರ್ಪಡಿಸಿದೆ.