ರಾಜ್ಯ ಶಾಲಾ ಕಲೋತ್ಸವ: ಜಿಲ್ಲೆಯ ಸ್ವಂತ ಮಂಗಲಂಕಳಿಯಲ್ಲಿ ಜಿಲ್ಲೆಗೆ ಎ ಗ್ರೇಡ್

ಹೊಸದುರ್ಗ: ಬುಡಕಟ್ಟು ಜನಾಂಗದ ಕಲೆಗಳನ್ನು ಒಳಗೊಳ್ಳಿಸಿ ನಡೆದ ಮೊದಲ ಶಾಲಾ ಕಲೋತ್ಸವದಲ್ಲಿ ಜಿಲ್ಲೆಯ ಸ್ವಂತವಾದ ಮಂಗಲಂಕಳಿ ಪ್ರದರ್ಶಿಸಿ ಅನಂತಪುರಿಯಲ್ಲಿ ಆ ಸ್ವಾದನೆಯ ಮಳೆ ಸುರಿಸಿ ಬಾನಂ ಸರಕಾರಿ ಹೈಸ್ಕೂಲ್ ಹಾಗೂ ಮಾಲೋತ್ ಕಸಬ ಜಿಎಚ್‌ಎಸ್ ಎಸ್‌ನ ಮಕ್ಕಳು ಗಮನ ಸೆಳೆದರು. ಹೈಸ್ಕೂಲ್ ವಿಭಾಗ ದಲ್ಲಿ ಬಾನ ಹಾಗೂ ಹೈಯರ್ ಸೆಕೆಂಡರಿಯಲ್ಲಿ ಮಾಲೋತ್ ಕಸಬ ಎ ಗ್ರೇಡ್ ಗಳಿಸಿದೆ.

ಜಿಲ್ಲೆಯ ಮಾವಿಲನ್, ಮಲವೇಟ್ಟುವನ್ ಸಮುದಾಯಗಳ ಸ್ವಂತ ಕಲೆಯನ್ನು ಅದರ ರಸ ಸೋರಿಕೆಯಾಗದಂತೆ ಹಾಡು, ತಾಳ, ಲಯದಲ್ಲಿ ಪ್ರದರ್ಶಿಸಿದಾಗ ತಿರುವನಂತಪುರ ರಾಜ್ಯ ಶಾಲಾ ಕಲೋತ್ಸವದಲ್ಲಿ ಪ್ರೇಕ್ಷಕರಿಂದ ಕರತಾಡನ ಲಭಿಸಿದೆ. ತಂಡದಲ್ಲಿದ್ದ 12 ಮಂದಿ ವಿದ್ಯಾರ್ಥಿಗಳಲ್ಲಿ 10 ಮಂದಿ ಮಾವಿಲನ್, ಮಲವೇಟ್ಟುವ ವಿಭಾಗದವರಾಗಿದ್ದಾರೆ ಎಂಬುದು ವಿಶೇಷವಾಗಿದೆ. ಇದೇ ವೇಳೆ ಮಾಲೋಂ ಕಸಬ ಶಾಲೆಯ ತಂಡದಲ್ಲಿ ಮಕ್ಕಳೆಲ್ಲಾ ಬುಡಕಟ್ಟು ವಿಭಾಗದವರಾ ಗಿದ್ದಾರೆ. ಇವರಿಗೆ ದಂಪತಿಯಾದ ಸುನಿಲ್ ಬಾನ, ಸುನಿತ ಸುನಿಲ್ ಬಾನ ಮಕ್ಕಳಿಗೆ ತರಬೇತಿ ನೀಡಿದ್ದರು.  ನಿಧಿನ್ ಕೊಟ್ಟಮಲ ಪ್ರಭು ಮಲೋತ್ ಶಾಲೆಯ ಮಕ್ಕಳಿಗೆ ತರಬೇತಿ ನೀಡಿದ್ದರು.

ನಿನ್ನೆ 111 ವಿಭಾಗ ಸ್ಪರ್ಧೆಗಳು ಪೂರ್ತಿಗೊಂಡಾಗ 414 ಅಂಕ ಪಡೆದು ಕಣ್ಣೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಬಳಿಕದ ಸ್ಥಾನದಲ್ಲಿ ೪೧೩ರಂತೆ ಅಂಕ ಪಡೆದ ತೃಶೂರ್, ಕಲ್ಲಿಕೋಟೆ ಇದೆ. 405 ಅಂಕದೊಂದಿಗೆ ಪಾಲಕ್ಕಾಡ್ ನಾಲ್ಕನೇ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *

You cannot copy content of this page