ರಾಮೇಶ್ವರಂ ಕೆಫೆಯಲ್ಲಿ ಬಾಂಬಿರಿಸಿದ ಪ್ರಕರಣ: ಉಗ್ರನ ಸೆರೆ

ಬೆಂಗಳೂರು: ಬೆಂಗಳೂರು ರಾಜಾಜಿನಗರದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಕರ್ನಾಟಕ ತೀರ್ಥಹಳ್ಳಿ ನಿವಾಸಿ  ಮುಸಾವೀರ್ ಸಾಜಿನ್ ಹುಸೈನ್ (೩೧) ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.

ಬಾಂಬ್ ಸ್ಫೋಟ ಬಳಿಕ ಈತ ಅಸ್ಸಾಂ ಮತ್ತು ಪಶ್ಚಿಮ ಬಂಗಾಲದಲ್ಲಿ ತಲೆಮರೆಸಿಕೊಂಡಿದ್ದನು. ಆ ಬಗ್ಗೆ ತನಿಖಾ ತಂಡಕ್ಕೆ ಲಭಿಸಿದ ಗುಪ್ತ ಮಾಹಿತಿಯಂತೆ ಪಶ್ಚಿಮಬಂಗಾಲದಲ್ಲಿ ಆತನನ್ನು ಬಂಧಿಸಲಾಗಿದೆಯೆಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಸಾಮಿಲ್ ಶೆರೀಫ್ ಎಂಬಾತನನ್ನು ಎನ್‌ಐಎ ಈ ಹಿಂದೆ ಬಂಧಿಸಿತ್ತು. ಆತನನ್ನು ಸಮಗ್ರವಾಗಿ ವಿಚಾರಣೆ ಗೊಳಪಡಿಸಿದ ವೇಳೆ  ಈ ಬಾಂಬ್ ಪ್ರಕರಣದಲ್ಲಿ ಇತರ ಆರೋಪಿಗಳ ಬಗ್ಗೆ ಎನ್‌ಐಎಗೆ ಮಾಹಿತಿ ಲಭಿಸಿತ್ತು. ಅದರಂತೆ ನಡೆಸಿದ ಕಾರ್ಯಾ ಚರಣೆಯಲ್ಲಿ  ಮುಸಾವೀರ್ ಸಾಜೀನ್ ಹುಸೈನ್‌ನನ್ನು ಬಂಧಿಸಲಾ ಗಿದೆ. ಈತನ ಹೊರತಾಗಿ ಅಬ್ದುಲ್ ಮದೀನ್ ತಾಹ ಎಂಬಾತನನ್ನೂ ಎನ್‌ಐಎ ಪಶ್ಚಿಮ ಬಂಗಾಲದಿಂದ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page