ರಾಷ್ಟ್ರೀಯ ಹೆದ್ದಾರಿಯಿಂದ ಜನರೇಟರ್, ಡ್ರಿಲ್ಲಿಂಗ್ ಯಂತ್ರ ಕಳವು
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತಂದಿರಿಸಿದ್ದ ಜನರೇಟರ್ ಹಾಗೂ ಡ್ರಿಲ್ಲಿಂಗ್ ಯಂತ್ರವನ್ನು ಹಾಡಹಗಲೇ ಕಳವುನಡೆಸಲಾಗಿದೆ. ಬಂದ್ಯೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಿದ್ದ ಇವುಗಳನ್ನು ನಿನ್ನೆ ಮಧ್ಯಾಹ್ನ 2.15ರಿಂದ ಸಂಜೆ 5 ಗಂಟೆ ಮಧ್ಯೆ ಕಳವು ನಡೆಸಿರುವುದಾಗಿ ದೂರಲಾ ಗಿದೆ. ಇದರಿಂದ ಸುಮಾರು 1.40 ಲಕ್ಷ ರೂಪಾಯಿ ನಷ್ಟಗೊಂಡಿರು ವುದಾಗಿ ತಿಳಿಸಲಾಗಿದೆ. ಕಳವುಬಗ್ಗೆ ಯುಎಲ್ಸಿಸಿಯ ಇಲೆಕ್ಟ್ರೀಶನ್ ರಜಿತ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತ್ತಿದ್ದಾರೆ.