ರಿಯಾಸ್ ಮೌಲವಿ ಕೊಲೆ ಪ್ರಕರಣ: ಸರಕಾರದಿಂದ ಹೈಕೋರ್ಟ್ಗೆ ಅಪೀಲು
ಕಾಸರಗೋಡು: ವಿವಾದವಾದ ರಿಯಾಸ್ ಮೌಲವಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪು ವಿರುದ್ಧ ರಾಜ್ಯ ಸರಕಾರ ಹೈಕೋರ್ಟ್ನಲ್ಲಿ ಅಪೀಲು ನೀಡಿದೆ. ವಿಚಾರಣಾ ನ್ಯಾಯಾಲಯದ ಆದೇಶ ಕಾನೂನು ವಿರುದ್ಧವೆಂದು ಸೂಚಿಸಿ ಸರಕಾರ ಅಪೀಲು ನೀಡಿರುವುದು. ಪ್ರೋಸಿಕ್ಯೂಶನ್ ಸೂಕ್ತವಾದ ಪುರಾವೆಗಳನ್ನು ಹಾಜರುಪಡಿಸಿಯೂ, ಆರೋಪಿಗಳನ್ನು ಖುಲಾಸೆಗೊಳಿಸಲು ದುರ್ಬಲವಾದ ಕಾರಣಗಳನ್ನು ವಿಚಾರಣೆ ನ್ಯಾಯಾಲಯ ಕಂಡುಕೊಂಡಿದೆ ಎಂದು ಸರಕಾರ ಹೈಕೋರ್ಟ್ಗೆ ನೀಡಿದ ಮನವಿಯಲ್ಲಿ ಆರೋಪಿಸಿದೆ. ವೈಜ್ಞಾನಿಕವಾದ ಪುರಾವೆಗಳನ್ನು ನ್ಯಾಯಾಲಯ ಅವಗಣಿಸಿದೆ ಎಂದು ಅಪೀಲ್ನಲ್ಲಿ ಆರೋಪಿಸಲಾಗಿದೆ. ಕಾಸರಗೋಡು ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯದ ತೀರ್ಪು ವಿರುದ್ಧ ಸರಕಾರ ಹೈಕೋರ್ಟ್ಗೆ ಅಪೀಲು ಸಲ್ಲಿಸಿರುವುದು.