ರೈತಸಂಘ ಕುಡಾಲು ಮೇರ್ಕಳ ವಿಲ್ಲೇಜ್ ಸಮ್ಮೇಳನ
ಉಪ್ಪಳ: ಭಾರತದ ಕೃಷಿ ಪರಂಪರೆಯನ್ನು ಮರೆತು ಕೇಂದ್ರ ಸರಕಾರ ಆಡಳಿತ ಮಾಡುತ್ತಿದೆ. ಇದರಿಂದ ಕೃಷಿಕರು ಕಷ್ಟ ಅನುಭ ವಿಸುತ್ತಿದ್ದಾರೆ ಎಂದು ಕುಡಾಲ್ ಮೇರ್ಕಳ ರೈತ ಸಂಘದ ವಿಲೇಜ್ ಸಮ್ಮೇಳನ ವನ್ನು ಸುಬ್ಬಯ್ಯಕಟ್ಟೆಯಲ್ಲಿ ಉದ್ಘಾಟಿಸಿದ ರಾಜ್ಯ ಸಮಿತಿ ಸದಸ್ಯ ಕೆ. ಆರ್. ಜಯಾನಂದ ನುಡಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ, ಬಿ ಸೀತಾರಾಮ ಶೆಟ್ಟಿ, ಎಸ್ ಬಾಲಕೃಷ್ಣ ಶೆಟ್ಟಿ, ಬಿ.ಎ ಖಾದರ್, ಬಿ.ಎ ಲತೀಫ್, ಪುಷ್ಪ ಭಾಗವಹಿ ಸಿದರು. ಪ್ರತಿನಿಧಿ ಸಮ್ಮೇಳನದಲ್ಲಿ ಹಿರಿಯ ಕೃಷಿಕರಾದ ತಿಮ್ಮಣ್ಣ ಶೆಟ್ಟಿ ಎಸ್, ಜೋಸೆಫ್ ಕ್ರಾಸ್ತ, ಮೊಹಮ್ಮದ್. ಕೆ.ಸಿ. ಎಂ. ಮೊಯಿದೀನ್ ಕೊಡಿ, ಮೂಸ ಕೊಂದಲಕಾಡ್, ಸಂಕಪ್ಪ ಬಂ ಗೇರರನ್ನು ಸನ್ಮಾನಿಸಲಾಯಿತು. ನೂತನ ವಿಲೇಜ್ ಸಮಿತಿಯನ್ನು ರೂಪೀಕರಿಸ ಲಾಯಿತು. ಅಧ್ಯಕ್ಷರಾಗಿ ಇಸ್ಮಾಯಿಲ್ ಕುಂಡಲ, ಕಾರ್ಯದರ್ಶಿಯಾಗಿ ದಿನೇಶ್ ಕಾಪು, ಕೋಶಾಧಿಕಾರಿಯಾಗಿ ವಿನೋದ್ ಡಿಸೋಜಾ ಆಯ್ಕೆಯಾ ದರು. ಪೈವಳಿಕೆಯಲ್ಲಿ ಜರಗಲಿರುವ ಮಂಜೇಶ್ವರ ಏರಿಯಾ ಸಮ್ಮೇಳನಕ್ಕೆ 15 ಮಂದಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.