ರೈಲಿನಲ್ಲಿ ಸಾಗಿಸುತ್ತಿದ್ದ 3.350 ಕಿಲೋ ಗಾಂಜಾ ವಶ
ಕಾಸರಗೋಡು: ಲೋಕಸಭಾ ಚುನಾವಣೆ ಇನ್ನೇನು ನಡೆಯಲಿ ರುವಂತೆಯೇ ಅಬಕಾರಿ ಇಲಾಖೆ ಜಿಲ್ಲೆ ಯಾದ್ಯಂತ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಿದೆ. ಇದರಂತೆ ಕಾಸರ ಗೋಡು ಅಬಕಾರಿ ರೇಂಜ್ ಇನ್ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ಕಾಸರಗೋಡು ರೈಲ್ವೇ ಭದ್ರತಾಪಡೆ ಮತ್ತು ಕಾಸರಗೋಡು ರೈಲ್ವೇ ಪೊಲೀಸರ ಸಹಾಯದೊಂದಿಗೆ ನಿನ್ನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಲಿನ ಎರಡನೇ ಪ್ಲಾಟ್ ಫಾಂನಿಂದ 3.350 ಕೆಜಿ ಗಾಂಜಾ ವಶಪಡಿಸಿ ಕೊಂಡಿದೆ. ಇದಕ್ಕೆ ಸಂಬಂಧಿಸಿ ಎನ್ಡಿಪಿಎಸ್ ಪ್ರಕರಣ ದಾಖಲಿಸ ಲಾಗಿದೆ. ಕಾಸರಗೋಡು ರೈಲ್ವೇ ನಿಲ್ದಾಣದ ಎರಡನೇ ಪ್ಲಾಟ್ ಫಾಂನಲ್ಲಿ ನಿಲ್ಲಿಸಲಾಗಿದ್ದ ಚೆನ್ನೈ ಮೈಲ್ ರೈಲಿನಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಈ ಮಾಲು ಪತ್ತೆಹಚ್ಚಲಾಗಿದೆ. ಗಾಂಜಾ ತಂದ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಂಡಿ ದ್ದಾನೆ. ಆದರೆ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲವೆಂದು ಅಬಕಾರಿ ತಂಡ ತಿಳಿಸಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಉಣ್ಣಿಕೃಷ್ಣನ್ ಕೆ, ಪ್ರಿವೆಂಟೀವ್ ಆಫೀಸರ್ (ಗ್ರೇಡ್)ಗಳಾದ ರಾಮ ಕೆ, ಪ್ರಶಾಂತ್ ಪಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ರಾಜೇಶ್ ಪಿ, ಕಣ್ಣನ್ ಕುಂಞಿ ಟಿ, ಶ್ಯಾಮ್ಜಿತ್, ಗೀತಾ ಟಿ.ವಿ, ಆರ್ಪಿಎಫ್ನ ಸಬ್ಇನ್ಸ್ಪೆಕ್ಟರ್ ಕದಿರೇಶ್ ಬಾಬು ಪಿ.ಕೆ, ದೀಪಕ್ ಎ.ವಿ, ಹೆಡ್ ಕಾನ್ಸ್ಟೇಬಲ್ ಗಳಾದ ರಾಜೀವನ್ ಪಿ, ಕಾನ್ಸ್ಟೇಬಲ್ ರಾಜೇಶ್ ಬಿ.ಟಿ. ಎಂಬವರು ಒಳಗೊಂಡಿದ್ದರು.