ರೈಲಿನಿಂದ ಬಿದ್ದು ಯುವತಿ ಸಾವು

ಕಾಸರಗೋಡು: ಸಂಚರಿಸುತ್ತಿದ್ದ ರೈಲು ಗಾಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಳನ್ನು ವಯನಾಡ್ ಕಾವಂಡುಂಡ್ ಮಂಞ್ಞಮಲೆಯಿಲ್ ಕರಿಯೋಡ್ ವೀಟಿಲ್‌ನ ಜೋ ಸೆಫ್ ಅಲಿಯಾಸ್  ಜೋಯ್-ಮೋಳಿ ಅಲಿಯಾಸ್ ಪ್ರೇಮ ದಂಪತಿ ಪುತ್ರಿ ಐಶ್ವರ್ಯ ಜೋಸೆಫ್ (೩೦) ಎಂದು ಗುರುತಿಸಲಾಗಿದೆ. ಇವರು ಕಲ್ಲಿಕೋಟೆಯ  ಮಾರ್ಕೆಟಿಂಗ್ ಸಂಸ್ಥೆ ಯೊಂದರ ಹ್ಯೂಮನ್ ರಿಸೋರ್ಸ್ ಮೆನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

  ನಿನ್ನೆ ಕಲ್ಲಿಕೋಟೆಯಿಂದ ಮಂಗಳೂರಿಗೆ ಸೇವೆ ನಡೆಸುತ್ತಿರುವ  ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿ ಸುತ್ತಿದ್ದ  ವೇಳೆ ಇವರು ಬೇಕಲ-ಕೋಟಿಕುಳಂ ನಡುವಿನ ಮಾಸ್ತಿಕುಂಡ್ ಎಂಬಲ್ಲಿ   ರೈಲಿನಿಂದ ಹೊರಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯ ತಿಳಿದ ಮೃತರ ಮನೆಯವರು ಕಾಸರಗೋ ಡಿಗೆ ಆಗಮಿಸಿದ್ದಾರೆ. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತರು ಏಕ ಸಹೋದರಿ ಅಕ್ಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page