ವಂದೇ ಭಾರತ್ ರೈಲಿನ ಬಿಡಿ ಭಾಗಗಳ ನಿರ್ಮಾಣ ಇನ್ನು ಅನಂತಪುರದಲ್ಲಿ

ಕಾಸರಗೋಡು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಯ ಬಿಡಿ ಭಾಗಗಳನ್ನು ಇನ್ನು ಕಾಸರಗೋಡಿನ ಅನಂತಪುರದಲ್ಲಿ ನಿರ್ಮಿಸಲಾಗುವುದು. 

ಇದರಂತೆ ರೈಲಿನ ಅಡಿಪಾಯ, ಶೌಚಾಲಯದ ಬಾಗಿಲುಗಳು ಮತ್ತು ಬರ್ತ್‌ಗಳನ್ನು  ಜಿಲ್ಲಾ ಕೈಗಾರಿಕಾ ಕೇಂದ್ರದ ಕುಂಬಳೆ ಸಮೀಪದ ಅನಂತಪುರದಲ್ಲಿರುವ ಕೈಗಾರಿಕಾ ಉದ್ಯಾನದಲ್ಲಿ ನಿರ್ಮಿಸಲಾಗುವುದು. ಪಂಜಾಬ್‌ನ ಖನ್ನವನ್ನು ಪ್ರಧಾನ ಕೇಂದ್ರವನ್ನಾಗಿಸಿ ಕಾರ್ಯಾಚರಿಸುತ್ತಿರುವ   ಖ್ಯಾತ ಉದ್ದಿಮೆ ಸಂಸ್ಥೆಯಾದ  ಮ್ಯಾಗ್ನಾಸ್ ಫೆವುಡ್ಸ್  ಕಂಪೆನಿ ಇದಕ್ಕಾಗಿ ಅನಂತಪುರದಲ್ಲಿ ತನ್ನ ಹೊಸ ಘಟಕವನ್ನು ಸ್ಥಾಪಿಸಿ ಅಲ್ಲಿ ವಂದೇ ಭಾರತ್‌ಗೆ ಅಗತ್ಯದ ಬಿಡಿ ಭಾಗಗಳನ್ನು ನಿರ್ಮಿಸಲಿದೆ.  ಈ ಘಟಕ ಆರಂಭಿಸುವ ಒಡಂಬಡಿಕೆಗೆ ಪ್ರಸ್ತುತ ಕೈಗಾರಿಕಾ ಕಂಪೆನಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಈಗಾಗಲೇ ಸಹಿ ಹಾಕಿವೆ. ಇಂಟೀರಿಯಲ್, ನಿರ್ಮಾಣ, ಉದ್ದಿಮೆ ಮತ್ತು ಸಾರಿಗೆ ವಲಯಗಳಲ್ಲಿ ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಕಾರ್ಯವೆಸಗುತ್ತಿರುವ ಭಾರತದ ಖ್ಯಾತ ಕಂಪೆನಿಯಾದ ಮ್ಯಾಗ್ನಾಸ್ ಫ್ಲೈವುಡ್ಸ್ ಸಂಸ್ಥೆಯು ರೈಲ್ವೇ ಇಲಾಖೆಯ ಕಪೂರ್‌ತಲದಲ್ಲಿರುವ  ರೈಲ್ವೇ ಕೋಚ್ ನಿರ್ಮಾಣ  ಕಾರ್ಖಾನೆ ಹಾಗೂ ರಾಯ್ ಬರೇಲಿಯಲ್ಲಿರುವ ಮೋಡರ್ನ್ ಕೋಚ್ ಫ್ಯಾಕ್ಟರಿಗಳಿಗೆ ಪಾರ್ಟೀಷನ್ ಫ್ಲೈವುಡ್ಸ್ ಪ್ಯಾನಲ್, ರೈಲು ಭೋಗಿಗಳ ಅಡಿಪಾಯಕ್ಕೆ ಅಗತ್ಯವಿರುವ ಅಗತ್ಯವಿರುವ ಹಲಗೆಗಳು, ಶೌಚಾಲಯಗಳಿಗೆ ಅಗತ್ಯದ ಬಾಗಿಲುಗಳು ಮತ್ತು ಇತರ ಬೋರ್ಡ್‌ಗಳನ್ನು  ಮ್ಯಾಗ್ನಾಸ್ ಕಂಪೆನಿಯೇ ನಿರ್ಮಿಸಿಕೊಡಲಿದೆ. ಮಾತ್ರವಲ್ಲ ರೈಲು ಭೋಗಿಗಳಿಗೆ ಅಗತ್ಯದ ಬರ್ತ್ (ಹಾಸಿಗೆ ಇತ್ಯಾದಿ)ಗಳನ್ನು ಇದೇ ಕಂಪೆನಿ ನಿರ್ಮಿಸುತ್ತಿದೆ.

 ಹೀಗೆ ಅನಂತಪುರದಲ್ಲಿ ನಿರ್ಮಿ ಸಲಾಗುವ    ಸಾಮಗ್ರಿಗಳನ್ನು ಬಳಿಕ ಚೆನ್ನೈಯ ರೈಲು ಭೋಗಿ ನಿರ್ಮಾಣ ಕಾರ್ಖಾನೆಗೆ ಸಾಗಿಸಲಾಗುವುದೆಂದು ಮ್ಯಾಗ್ನಾಸ ಫ್ಲೈವುಡ್ಸ್ ಸಂಸ್ಥೆಯ ಮಾಲಕ ಮಹೇಶ್ ಗುಪ್ತ ತಿಳಿಸಿದ್ದಾರೆ.

ದೀರ್ಘಕಾಲದ ತನಕ ಬಾಳ್ವಿಕೆ ಬರುವ, ಅಗ್ನಿಅನಾಹುತ ತಡೆಯಲು ಸಾಧ್ಯವಾಗುವ ರೀತಿಯ ಹಾಗೂ ಯಾವುದೇ ರೀತಿಯ ರಾಸಾಯನಿಕ ವಸ್ತುಗಳ ಪ್ರಭಾವ ತಡೆಗಟ್ಟುವ ಸಾಮರ್ಥ್ಯ ಹೊಂದಿರುವ ಕಂಪ್ರೆಸ್ ಫ್ಲೈವುಡ್ಸ್ , ಪ್ರೀಲಿಮಿಟೆಡ್ ಶೀಟ್,   ಶಬ್ದ ವಿನ್ಯಾಸವನ್ನು ಕ್ರಮೀಕರಿಸುವ ಬೋರ್ಡ್ ಇತ್ಯಾದಿ ಸಾಮಗ್ರಿಗಳನ್ನು  ಅನಂತಪುರದಲ್ಲಿ ನಿರ್ಮಿಸಲಾಗುವುದು. ಇದರ ಹೊರತಾಗಿ ಟಾಟಾ ಬೋಲ್ಡ್ಡ್‌ಸ್ ಬಿ.ಎಸ್.ಎಫ್, ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೂ  ಅನಂತ ಪುರದ ಈ ಕಾರ್ಖಾನೆಯಿಂದಲೇ ಅಗತ್ಯದ ಫ್ಲೈವುಡ್ಸ್ ಸಾಮಗ್ರಿಗಳನ್ನು ತಯಾರಿಸಿ ವಿತರಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page