ವಕ್ಫ್ ತಿದ್ದುಪಡಿ ಮಸೂದೆ: 36 ಕೇಂದ್ರಗಳಲ್ಲಿ ಸಮಸ್ತದ ಪ್ರತಿಭಜನಾ ಧರಣಿ 23ರಂದು
ಕಾಸರಗೋಡು: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸಮಸ್ತ ಕೇರಳ ಜಂಇಯತ್ತುಲ್ ಉಲಮ ನಡೆಸುವ ಕಾನೂನು ಹೋರಾಟಗಳಿಗೆ, ಆಂದೋಲನಗಳಿಗೆ ಬೆಂಬಲ ನೀಡಲು ಹಾಗೂ ಅದರಂಗವಾಗಿ ಈ ತಿಂಗಳ 23ರಂದು ಬೆಳಿಗ್ಗೆ ಜಿಲ್ಲೆಯ 39 ರೇಂಜ್ ಕೇಂದ್ರಗಳ ಕೇಂದ್ರ ಸರಕಾರಿ ಕಚೇರಿಗಳ ಮುಂಭಾಗ ಪ್ರತಿಭಟನಾ ಧರಣಿ ನಡೆಸಲು ಸಮಸ್ತ ಕೇರಳ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಜಿಲ್ಲಾಧ್ಯಕ್ಷ ಎಂ.ಎಸ್. ತಂಙಳ್ ಮದನಿ ಈ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ರಶೀದ್ ಬೆಳಿಂಜ, ಕೋಶಾಧಿಕಾರಿ ಸಿ.ಎಂ. ಅಬ್ದುಲ್ ಖಾದರ್ ಹಾಜಿ, ಕೆ.ವಿ. ಕುಟ್ಟಿ ಹಾಜಿ ಸಹಿತ ಹಲವರು ಮಾತನಾಡಿದರು.