ವಯನಾಡ್ ದುರಂತ: ಸರಕಾರಿ ನೌಕರರಿಂದ 5 ದಿನದ ವೇತನ ಬರ ಪರಿಹಾರ ನಿಧಿಗೆ
ತಿರುವನಂತಪುರ: ವಯನಾಡ್ ದುರಂತದಿಂದ ಸಂಕಷ್ಟಕ್ಕೀಡಾದವರಿಗೆ ಸಹಾಯವೊದಗಿಸಲು ಸರಕಾರಿ ನೌಕರರು ಐದು ದಿನಗಳ ವೇತನವನ್ನು ನೀಡುವುದಾಗಿ ಸಂಘಟನೆಗಳು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ರಿಗೆ ತಿಳಿಸಿವೆ.
ಇದೇ ವೇಳೆ ಇದನ್ನು ಗಡುಗಳಾಗಿ ನೀಡಲು ಸೌಕರ್ಯ ಒದಗಿಸಬೇಕೆಂದೂ ಆಗ್ರಹಿಸಲಾಗಿದೆ. ಸಂಘಟನೆಗಳ ನೇತಾರರನ್ನು ಆಹ್ವಾನಿಸಿ ಮುಖ್ಯಮಂತ್ರಿ ಸಹಾಯಕ್ಕಾಗಿ ವಿನಂತಿಸಿದ್ದಾರೆ. ಇದೇ ವೇಳೆ ‘ಸ್ಯಾಲರಿ ಚಾಲೆಂಜ್’ ಎಂಬ ವ್ಯವಸ್ಥೆ ಇಲ್ಲ. ಬದಲಾಗಿ ತಿಂಗಳಿಗೆ ಒಂದು ದಿನದ ವೇತನ ಎಂಬ ರೀತಿಯಲ್ಲಿ 5 ಗಡುಗಳಾಗಿ ನೀಡಲು ಇಚ್ಛಿಸುವವರು ಅದಕ್ಕೆ ಅವಕಾಶ ನೀಡಬೇಕೆಂದು ಸಂಘಟನೆಗಳು ಆಗ್ರಹಿಸಿದೆ. ಇದೇ ವೇಳೆ ಒಂದೇ ಗಡುವಾಗಿಯೋ ಅಥವಾ 5 ದಿನಕ್ಕಿಂತಲೂ ಹೆಚ್ಚು ದಿನಗಳ ವೇತನ ನೀಡಲಿಚ್ಛಿಸುವವರಿಗೆ ಅದನ್ನು ನೀಡಬಹುದೆಂದೂ ತಿಳಿಸಲಾಗಿದೆ.