ವಿದ್ಯಾನಿಕೇತನ ಜಿಲ್ಲಾ ಮಟ್ಟದ ಕಲೋತ್ಸವ
ಕಾಸರಗೋಡು: ದ್ವೇಷದ, ಪರಸ್ಪರ ಸ್ಪರ್ಧಿಸುವ, ಅಹಂಕಾರದ ವೇದಿಕೆಗಳಾಗಿ ವಿದ್ಯಾಲಯಗಳ ಕಲೋತ್ಸವಗಳು ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ಪರಸ್ಪರ ಸ್ನೇಹ ಹಾಗೂ ಸಹಕಾರದ ಉತ್ತಮ ಉದಾಹರಣೆ ಯಾಗಿ ಜನರು ಉತ್ಸವವಾಗಿ ಆಚರಿಸುವ ವೇದಿಕೆಗಳಾಗಿ ವಿದ್ಯಾನಿಕೇತನ್ ಕಲೋತ್ಸವಗಳು ಬದಲಾಗಿದೆಯೆಂದು ರಾಜ್ಯಾಧ್ಯಕ್ಷ ಪಿ. ಗೋಪಾಲನ್ ಕುಟ್ಟಿ ನುಡಿದರು. ಶ್ರೀವಿಷ್ಣು ವಿದ್ಯಾಲಯ ಪರವನಡ್ಕದಲ್ಲಿ ನಡೆದ ವಿದ್ಯಾನಿಕೇತನ ಜಿಲ್ಲಾ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಾರ್ಯಕ್ರಮದಲ್ಲಿ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ವಿದ್ಯಾನಿಕೇತನ್ ಜಿಲ್ಲಾಧ್ಯಕ್ಷ ಕೆ. ಶಿವಶಂಕರನ್ ನಾಯರ್, ಡಾ. ಮೇಲತ್ತ್ ಚಂದ್ರಶೇಖರನ್ ನಾಯ ರ್ ಸಹಿತ ಹಲವರು ಮಾತನಾಡಿ ದರು. ಪರವನಡ್ಕ ಪೇಟೆಯಲ್ಲಿ ಸಾಂಸ್ಕೃತಿಕ ಶೋಭಾಯಾತ್ರೆ ಜರಗಿತು.