ವಿದ್ಯಾರ್ಥಿಗಳನ್ನು ಕನಸು ಕಾಣಲು ಪ್ರಾಪ್ತಗೊಳಿಸಬೇಕು- ಯು.ಟಿ. ಖಾದರ್
ಪುತ್ತಿಗೆ: ಅನುದಿನವೂ ಬದಲಾ ವಣೆಗಳಿಗೆ ವಿಧೇಯವಾಗುತ್ತಿರುವ ನೂತನ ವಿಶ್ವದಲ್ಲಿ ಶಿಕ್ಷಣ ರಂಗದಲ್ಲಿ ಹೊಸ ಕನಸುಗಳನ್ನು ಕಾಣಲು ವಿದ್ಯಾರ್ಥಿಗಳನ್ನು ಪ್ರಾಪ್ತಗೊಳಿಸ ಬೇಕೆಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯ ಪಟ್ಟರು. ಮುಹಿಮ್ಮಾತ್ ನಲ್ಲಿ ನಡೆದ ತ್ವಾಹಿರುಲ್ ಅಹ್ದಲ್ ತಂಙಳ್ರ ಉರೂಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಹಿಂದಿನ ಕಾಲದ ವಿದ್ಯಾರ್ಥಿಗಳು ಕಂಡ ಕನಸುಗಳಾಗಿವೆ ಇಂದಿನ ವಿಜ್ಞಾನ ಬೆಳವಣಿಗೆಗೆ ಆಧಾರವೆಂದು ಅವರು ನುಡಿದರು. ಮುಹಿಮ್ಮಾತ್ನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ನಡೆಸುವ ಸೇವೆಗಳು ಅಭಿನಂದನಾರ್ಹವೆಂದು ಅವರು ನುಡಿದರು. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಧಾನ ಭಾಷಣ ಮಾಡಿದರು.