ವಿದ್ಯುತ್ ತಂತಿ ಮೇಲೆ ಬಿದ್ದ ಮರದ ರೆಂಬೆ

ಮೊಗ್ರಾಲ್: ಇಂದು ಮುಂಜಾನೆ ಬೀಸಿದ ಗಾಳಿ ಹಾಗೂ ಮಳೆಗೆ ಮೊಗ್ರಾಲ್ ನಾಂಗಿ ರಸ್ತೆಯಲ್ಲಿ ಮರದ ರೆಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಇದರಿಂದ ಈ ಪರಿಸರ ದಲ್ಲಿ ವಿದ್ಯುತ್ ಮೊಟಕುಗೊಂಡಿದೆ.  ಅಲ್ಲದೆ ನಾಂಗಿ ರಸ್ತೆಯಲ್ಲಿ ಸಾರಿಗೆ ಅಡ ಚಣೆಯೂ ಉಂಟಾಯಿತು.  ವಿಷಯ ತಿಳಿದು ವಾರ್ಡ್ ಸದಸ್ಯ ರಿಯಾಸ್ ಮೊಗ್ರಾಲ್ ಕೂಡಲೇ ಕೆಎಸ್‌ಇಬಿ ಅಧಿಕಾರಿಗಳಿಗೆ ವಿಷಯ ತಿಳಿಸಿ ಆ ಭಾಗಕ್ಕಿರುವ ವಿದ್ಯುತ್ ಸಂಪರ್ಕ ವಿಚ್ಛೇಧಿಸಲಾಯಿತು.  ಅನಂತರ ವಾರ್ಡ್ ಸದಸ್ಯನ ನೇತೃತ್ವದಲ್ಲಿ ತಕ್ವಾನಗರ್ ನಿವಾಸಿಗಳು ಸೇರಿ  ಮರದ ರೆಂಬೆಗಳನ್ನು  ತೆರವುಗೊಳಿಸಿ ರಸ್ತೆಯಲ್ಲಿ ವಾಹನ ಸಂ ಚಾರ ಸುಗಮಗೊಳಿಸಿದರು. ಬಳಿಕ ವಿದ್ಯು ತ್ ಸಂಪರ್ಕ ಮರುಸ್ಥಾಪಿಸಲಾಯಿತು.

RELATED NEWS

You cannot copy contents of this page