ವಿದ್ಯುತ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಆಂದೋಲನ
ಮಂಜೇಶ್ವರ: ನಿರುದ್ಯೋಗ, ಬೆಲೆಯೇರಿಕೆ, ತೆರಿಗೆ ಭಯೋತ್ಪಾದನೆ ಹಾಗೂ ಆಡಳಿತ ಅವ್ಯವಸ್ಥೆಗಳಿಂದ ಕಂಗೆಟ್ಟ ಜನರ ಬದುಕಿಗೆ ವಿದ್ಯುತ್ ದರ ಏರಿಕೆ ಮೂಲಕ ಎಡರಂಗ ಸರಕಾರ ಮಾರಕ ಹೊಡೆತ ನೀಡಿದ್ದು, ಇದರ ವಿರುದ್ಧ ಕಾಂಗ್ರೆಸ್ ಆಂದೋಲನ ತೀವ್ರಗೊಳಿಸಲಿದೆ ಎಂದು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿಎಂಕೆ ತಿಳಿಸಿದ್ದಾರೆ.
ವಿದ್ಯುತ್ ದರ ಏರಿಕೆ ವಿರುದ್ಧ ಮೊದಲ ಹಂತದಲ್ಲಿ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಈ ತಿಂಗಳ ೧೬ರಂದು ಎರಡನೇ ಹಂತದ ಪ್ರತಿಭಟನೆ ವಿದ್ಯುತ್ ಸೆಕ್ಷನ್ ಕಚೇರಿಗಳ ಮುಂದೆ ನಡೆಯಲಿದೆ.
ಇದರಂತೆ ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಜೇಶ್ವರ ಸೆಕ್ಷನ್ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೆ. ನಂಬ್ಯಾರ್ ಉದ್ಘಾಟಿಸಿದರು. ಮುಖಂಡರಾದ ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ, ಪುರುಷೋತ್ತಮ ಅರಿಬೈಲ್, ಹನೀಫ್ ಪಡಿಂಞಾರ್, ದಾಮೋ ದರ, ಇಕ್ಬಾಲ್ ಕಳಿಯೂರು, ಸತೀಶ್ ಅಡಪ್ಪ ಸಂಕಬೈಲ್, ಮುಹಮ್ಮದ್ ಮಜಾಲ್, ನಾಗೇಶ್ ಮಂಜೇಶ್ವರ, ಗೀತಾ ಬಂದ್ಯೋಡು, ತಾಹಿರಾ ಉಪ್ಪಳ, ಜೆಸ್ಸಿ ಕಣ್ವತೀರ್ಥ, ವಸಂತರಾಜ್ ಶೆಟ್ಟಿ, ಗಣೇಶ್ ಪಾವೂರು, ವಿ.ಪಿ. ಮಹಾರಾಜನ್, ಯೂಸುಫ್, ಮೊಹಮ್ಮದ್ ಜೆ, ರಾಜೇಶ್ ನಾಯ್ಕ್ ಹೇರೂರು, ಮೊಹಮ್ಮದ್ ಕೆದುಂಬಾಡಿ, ಹಮೀದ್ ಕಣಿಯೂರು ಸಹಿತ ಹಲವರು ಉಪಸ್ಥಿತರಿದ್ದರು. ದಿವಾಕರ ಎಸ್.ಜೆ. ಸ್ವಾಗತಿಸಿ, ಮುಹಮ್ಮದ್ ಸೀಗಂದಡಿ ವಂದಿಸಿದರು.