ವಿವಾದಕ್ಕೆಡೆಯಾದ ಇ.ಪಿ. ಜಯರಾಜನ್ರ ಆತ್ಮಕತೆ: ಬಿಡುಗಡೆ ಮುಂದೂಡಿಕೆ
ತಿರುವನಂತಪುರ: ವಯನಾಡು, ಚೇಲಕ್ಕರ ಉಪಚುನಾವಣೆ ಮತದಾನ ಆರಂಭಗೊಂಡ ಬೆನ್ನಲ್ಲೇ ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಇ.ಪಿ. ಜಯ ರಾಜನ್ರ ಆತ್ಮಕತೆ ವಿವಾದ ಸೃಷ್ಟಿಸಿದೆ.
‘ಕಟ್ಟನ್ ಚಾಯಯುಂ ಪರಿಪ್ಪುವೆಡಯುಂ-ಒರು ಕಮ್ಯೂನಿಸ್ಟ್ ಕಾರಂಡೆ ಜೀವಿದತ್ತಿಲ್’ ಎಂಬ ಹೆಸರಿನ ಪುಸ್ತಕದಲ್ಲಿರುವ ವಿಷಯಗಳು ವಿವಾದ ಸೃಷ್ಟಿಸಿರುವುದಾಗಿ ಹೇಳ ಲಾಗುತ್ತಿದೆ. ಪುಸ್ತಕದಲ್ಲಿ ಒಳಗೊಂ ಡಿರುವ ವಿಷಯಗಳು ಬಹಿರಂಗಗೊಳ್ಳು ತ್ತಲೇ ಅದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚಾ ವಿಷಯವಾಗಿ ಬದ ಲಾಗಿದೆ. ಎಲ್ಡಿಎಫ್ ಕನ್ವೀನರ್ ಸ್ಥಾನದಿಂದ ಬದಲಿಸಿದುದು ತನ್ನ ಮನಸ್ಸಿಗೆ ನೋವುಂಟುಮಾಡಿದೆ. ಆದರೆ ಅದನ್ನು ಪಕ್ಷ ಅರ್ಧೈಸಿಕೊಂ ಡಿಲ್ಲವೆಂದೂ ಪುಸ್ತಕದಲ್ಲಿ ತಿಳಿಸಲಾಗಿದೆ. ಈ ಪುಸ್ತಕವನ್ನು ಇಂದು ಬಿಡುಗಡೆ ಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಅದಕ್ಕಿಂತ ಮೊದಲೇ ಅದು ವಿವಾದ ಕ್ಕೆಡೆಯಾ ದುದರಿಂದ ಬಿಡುಗಡೆಯನ್ನು ಮುಂದೂಡಲಾಗಿದೆ. ಇದೇ ವೇಳೆ ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡಿರುವ ಇ.ಪಿ. ಜಯರಾಜನ್ ಪುಸ್ತಕದಲ್ಲಿ ಒಳಗೊಂಡಿರುವ ವಿವಾದ ಹೇಳಿಕೆಗಳನ್ನು ತಾನು ಬರೆದಿಲ್ಲವೆಂದು ತಿಳಿಸಿದ್ದಾರೆ.