ವಿವಿಧ ಕಡೆ ದಿನ ಪೂರ್ತಿ ಉರಿಯುತ್ತಿರುವ ಮಿನಿಮಾಸ್ಟ್ ದೀಪ
ಉಪ್ಪಳ: ಕೆಲವು ಕಡೆ ಬೀದಿ ದೀಪ ವಿದ್ದರೂ ಉರಿಯದೆ ಕತ್ತಲÁವರಿಸು ತ್ತಿದ್ದರೆ, ಇನ್ನು ಹಲವೆಡೆ ಹಗಲು ಹೊತ್ತು ದಿನವಿಡೀ ಉರಿಯುತ್ತಿರು ವುದು ಕಂಡುಬರುತ್ತಿದೆ. ಮಣ್ಣಂಗುಳಿ, ಜನಪ್ರಿಯ, ಸೋಂಕಾಲು ಮಸೀದಿ ಬಳಿಯ ಬಸ್ ನಿಲ್ದಾಣ ಪರಿಸರದಲ್ಲಿ ಅಳವಡಿಸಲಾದ ಮಿನಿ ಮಾಸ್ಟ್ ಬೀದಿ ದೀಪ ಹಲವಾರು ತಿಂಗಳುಗಳಿAದ ಹಗಲು ಹೊತ್ತಿನಲ್ಲಿ ಉರಿಯುತ್ತಿರು ವುದಾಗಿ ಸಾರ್ವಜನಿಕರು ದೂರಿ ದ್ದಾರೆ. ಇದರಿಂದ ಪಂಚಾಯತ್ಗೆ ವಿದ್ಯುತ್ ಬಿಲ್ನ ಹೊರೆ ಅಧಿಕವಾಗುವ ಸಾದ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸೋಂಕಾಲು ಮಸೀದಿ ಬಳಿಯ ಬಸ್ ನಿಲ್ದಾಣದ ಪರಿಸರದಲ್ಲಿರುವ ಕಂಬದಲ್ಲಿ ಅಳವಡಿಸಿದ ಪ್ಯೂಸ್ ಹಾನಿಗೀಡಾಗಿರು ವುದೇ ದೀಪ ಹಗಲು ಹೊತ್ತಿನಲ್ಲಿ ಉರಿಯಲು ಕಾರಣವೆನ್ನಲಾಗಿದೆ. ಇಲ್ಲಿ ಈ ಹಿಂದೆ ಒಂದು ತಿಂಗಳ ತನಕ ನಿರಂತರವಾಗಿ ಹಗಲು ಹೊತ್ತಿನಲ್ಲಿ ಉರಿಯುತ್ತಿತ್ತು. ಬಳಿಕ ನಂದುತ್ತಿತ್ತು. ಇದೀಗ ಹಲವು ದಿನಗಳಿಂದ ಹಗಲು ಹೊತ್ತಿನಲ್ಲಿ ಉರಿಯುತ್ತಿದೆ. ಇದೇ ರೀತಿ ರಸ್ತೆ ಬದಿಯಲ್ಲಿರುವ ಕೆಲ ವೊಂದು ಬೀದಿ ದೀಪಗಳು ಹಗಲು ಉರಿಯುತ್ತಿದೆ. ಅಧಿಕಾರಿಗಳಿಗೆ ದೂರು ನೀಡಿದರೂ ದುರಸ್ತಿಗೆ ಕ್ರಮಕೈಗೊಳ್ಳು ತ್ತಿಲ್ಲವೆಂದು ದೂರಲಾಗಿದೆ.
ಇದೇ ವೇಳೆ ಪ್ರತಾಪನಗರ ಸಹಿತ ವಿವಿಧ ಕಡೆಗಳಲ್ಲಿ ದೀಪ ಕೆಟ್ಟು ಹೋಗಿದ್ದರು ದುರಸ್ತಿ ನಡೆಸದಿರುವು ದರಿಂದ ಪ್ರದೇಶ ಕತ್ತಲಾಗಿದೆ. ದೀಪಗಳನ್ನು ದುರಸ್ತಿಗೊಳಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.