ವಿವಿಧ ಬೇಡಿಕೆ ಮುಂದಿಟ್ಟು ಕುಂಬಳೆಯಲ್ಲಿ ಆಟೋ ರಿಕ್ಷಾ ಕಾರ್ಮಿಕರಿಂದ ಪಂ. ಕಚೇರಿ ಮಾರ್ಚ್
ಕುಂಬಳೆ: ಆಟೋ ಕಾರ್ಮಿಕರ ಯೂನಿಯನ್ ಸಿಐಟಿಯು ಕುಂಬಳೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಪಂಚಾಯತ್ಗೆ ಮಾರ್ಚ್, ಧರಣಿ ನಡೆಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಎ. ರಹ್ಮಾನ್ ಉದ್ಘಾಟಿಸಿದರು. ಇರ್ಷಾದ್ ಚಾಕೊ ಅಧ್ಯಕ್ಷತೆ ವಹಿಸಿದರು. ಸಿಐಟಿಯು ಏರಿಯಾ ಕಾರ್ಯದರ್ಶಿ ಪಿ. ಇಬ್ರಾಹಿಂ, ಜಿ. ರತ್ನಾಕರನ್, ಪ್ರಸಾದ್ ಕುಮಾರ್, ಅಲಿಬಾಯ್, ಅಬ್ಬಾಸ್ ಮಾತನಾಡಿದರು. ಎಂ.ಸಿ. ದಿನೇಶನ್ ಸ್ವಾಗತಿಸಿದರು. ಅನಿಲ್ ಕುಂಬ್ಳೆ ರಸ್ತೆಯಿಂದ ಆರಂಭಿಸಿದ ಮೆರವಣಿಗೆಗೆ ಶರೀಫ್, ಅಬ್ದುಲ್ ಜಲೀಲ್, ಮೊಹಮ್ಮದ್ ರಾಫಿ, ಮೊಹಮ್ಮದ್ ಶರೀಫ್ ಮುಳಿಯಡ್ಕ ನೇತೃತ್ವ ನೀಡಿದರು. ಪಾರ್ಕಿಂಗ್ ನಂಬ್ರ ನೀಡುವುದಾಗಿ ತಿಳಿಸಿ ಆಟೋ ಕಾರ್ಮಿಕರಿಂದ 100 ರೂ.ನಂತೆ ಪಡೆದು ನಂಬರ್ ನೀಡದಿರುವುದು, ಖಾಯಂ ಆಟೋ ನಿಲುಗಡೆಗೆ ಸ್ಥಳ ಲಭ್ಯಗೊಳಿಸದಿರುವುದು, ಪರ್ಮಿಟ್ ನಿಯಂತ್ರಿಸದಿರುವುದನ್ನು ಪ್ರತಿಭಟಿಸಿ ಮಾರ್ಚ್, ಧರಣಿ ನಡೆಸಲಾಯಿತು. ಬಳಿಕ ಪಂಚಾಯತ್ ಅಧ್ಯಕ್ಷೆಯೊಂ ದಿಗೆ ಚರ್ಚಿಸಿ ಮನವಿ ನೀಡಲಾಯಿತು.