ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 112ನೇ ವರ್ಷದಲ್ಲಿ ನಿಧನ
ಲಂಡನ್: ವಿಶ್ವದ ಅತ್ಯಂತ ಹೆಚ್ಚು ಪ್ರಾಯದ ಓನ್ಟಿನ್ನಿಸ್ವುಡ್ 112ನೇ ವಯಸ್ಸಿನಲ್ಲಿ ನಿಧನಹೊಂ ದಿದರು. ಇಂಗ್ಲೆಡ್ನ ಸೌತ್ಪೋರ್ಟ್ ನ ಕೇರ್ ಹೋಂನಲ್ಲಿ ಇವರು ನಿಧನರಾಗಿದ್ದಾರೆ. 1912 ಅಗೋಸ್ತ್ 26ರಂದು ಲಿವರ್ ಪೂಲ್ನಲ್ಲಿ ಜನಿಸಿದ ಓನ್ಟಿನ್ನಿಸ್ವುಡ್ ಕಳೆದ ಎಪ್ರಿಲ್ನಲ್ಲಿ ವಿಶ್ವದ ಅತ್ಯಂತ ಹೆಚ್ಚು ಪ್ರಾಯದ ಮನುಷ್ಯ ಎಂಬ ರೆಕಾ ರ್ಡ್ಗೆ ಅರ್ಹರಾಗಿದ್ದರು. ವೆನಿಜು ವಲಾದ 114ರ ಪ್ರಾಯದ ಜುವಾನ್ ವಿನ್ಸೆಂಟ್ ತೆರೇಸ್ರ ನಿಧನದ ಬಳಿಕ ಅತ್ಯಂತ ಹೆಚ್ಚು ಪ್ರಾಯದ ವ್ಯಕ್ತಿ ಇವರಾಗಿದ್ದಾರೆ.