ವ್ಯಾಪಕ ಅವ್ಯವಹಾರ ಆರೋಪಿಸಿ ಕುಂಬಳೆ ಪಂಚಾಯತ್‌ಗೆ ಬಿಜೆಪಿ ಮಾರ್ಚ್
ಕುಂಬಳೆ: ಪಂಚಾಯತ್‌ನಲ್ಲಿ ಮುಸ್ಲಿಂಲೀಗ್, ಕಾಂಗ್ರೆಸ್, ಎಸ್‌ಡಿಪಿಐ ನೇತೃತ್ವದ ಆಡಳಿತ ಸಮಿತಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದಾಗಿ ಆರೋಪಿಸಿ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಪಂ. ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸ ಲಾಯಿತು. ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣದ ವಿಚಾರದಲ್ಲಿ ೪೦ ಲಕ್ಷ ರೂ. ಮೊತ್ತ ವಿನಿಯೋಗಿಸಿ ಅವ್ಯವಹಾರ ನಡೆದಿದ್ದು, ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾ ಮಾರ್ಚ್ ಉದ್ಘಾಟಿಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಆಗ್ರಹಿಸಿದರು. ಬಿಜೆಪಿ ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ ಅಧ್ಯಕ್ಷತೆ ವಹಿಸಿದರು. ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಮಾತನಾಡಿದರು. ಮಂಡಲ ಮುಖಂಡ ನಾದ ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್, ಪ್ರದೀಪ್ ಕುಮಾರ್, ರಾಧಾಕೃಷ್ಣ ರೈ, ಪ್ರೇಮಾವತಿ, ಪಂಚಾಯತ್, ಬ್ಲೋಕ್ ಪಂಚಾಯತ್ ಬಿಜೆಪಿ ಸದಸ್ಯರು ಸಹಿತ ಹಲವರು ಭಾಗವಹಿ ಸಿದರು. ಕುಂಬಳೆ ಪಂಚಾ ಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ ವಂದಿಸಿದರು.