ವ್ಯಾಪಾರಿ ಕುಸಿದು ಬಿದ್ದು ಮೃತ್ಯು

ಸೀತಾಂಗೋಳಿ:  ವ್ಯಾಪಾರಿ ಯೊಬ್ಬರು ಕುಸಿದುಬಿದ್ದ್ದು ಮೃತಪಟ್ಟರು.

ಊಜಂಪದವು ಬಿಸ್ಮಿಲ್ಲ ಮಂಜಿಲ್‌ನ ಮೊಹಮ್ಮದ್  ಪುತ್ತೂರು (೫೫) ಎಂಬವರು ಮೃತಪಟ್ಟ ದುರ್ದೈವಿ. ಇವರು ಶನಿವಾರ ಮಧ್ಯಾಹ್ನ ಸೀತಾಂಗೋಳಿ ಪೇಟೆಗೆ ಬಂದಿದ್ದರು. ಈ ವೇಳೆ ಅಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಆಯಿಶಾ, ಸಹೋದರ-ಸಹೋದರಿಯರಾದ ಅಬ್ದುಲ್ಲ, ಕುಂಞಿ ಅಲೀಮ, ಆಯಿಶಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page