ಶಾಲಾ ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕ ಕುಸಿದುಬಿದ್ದು ಮೃತ್ಯು
ಕಾಸರಗೋಡು: ಶಾಲಾ ಕಟ್ಟಡ ನಿರ್ಮಾಣ ವೇಳೆ ಕುಸಿದು ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಬೇಕಲ ಮವ್ವಲ್ನ ಬಿ.ಎಂ. ಬಶೀರ್ (52) ಮೃತಪಟ್ಟ ವ್ಯಕ್ತಿ. ಪಿಲಿಕ್ಕೋಡ್ ಸರಕಾರಿ ಯುಪಿ ಶಾಲೆ ಕಟ್ಟಡದ ನಿರ್ಮಾಣ ಕೆಲಸದಲ್ಲಿ ಬಶೀರ್ ನಿರತರಾಗಿದ್ದರು. ನಿನ್ನೆ ಸಂಜೆ ಕೆಲಸದ ವೇಳೆ ಕುಸಿದುಬಿದ್ದ ಇವರನ್ನು ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೂ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಚಂದೇರ ಪೊಲೀಸರು ಅಸಹಜ ಸಾವು ಪ್ರಕರಣ ದಾಲಿಸಿಕೊಂಡಿದ್ದಾರೆ.
ದಿ| ವಿ.ಎಂ. ಮುಹಮ್ಮದ್-ಆಯಿಷಾ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿ ಯರಾದ ಹಾರಿಸ್, ರಸೀನ, ರಹ್ನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಹಾಶಿಂ ಈ ಹಿಂದೆ ನಿಧನರಾಗಿದ್ದಾರೆ.