ಶೂ ಧರಿಸಿ ಶಾಲೆಗೆ ತಲುಪಿದ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳಿಂದ ಪೈಶಾಚಿಕ ರೀತಿಯ ಹಲ್ಲೆ

ಕಾಸರಗೋಡು: ಶೂ ಧರಿಸಿ ಶಾಲೆಗೆ ತಲುಪಿದ ದ್ವೇಷದಿಂದ ಪ್ಲಸ್ ವನ್ ವಿದ್ಯಾರ್ಥಿಗೆ ಪೈಶಾಚಿಕ ರೀತಿಯಲ್ಲಿ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ತಾರಿಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶೂ ಧರಿಸಿ ತಲುಪಿದ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳ ತಂಡ ಹಲ್ಲೆಗೈದಿದೆ. ವಿದ್ಯಾರ್ಥಿಯ ಮುಖಕ್ಕೆ, ತಲೆಕೂದಲು ಹಿಡಿದು ಹಲ್ಲೆಗೈಯ್ಯುವ ದೃಶ್ಯಗಳು ಬಹಿರಂಗಗೊಂಡಿದೆ. ಘಟನೆ ಕುರಿತು ಮನೆಯಲ್ಲಿ ತಿಳಿಸಿದರೆ ಇನ್ನೂ ಹಲ್ಲೆ ನಡೆಸುವುದಾಗಿ ತಂಡ ಬೆದರಿಕೆಯೊಡ್ಡಿರುವುದರಿಂದ ವಿದ್ಯಾರ್ಥಿ ಈ ಘಟನೆಯನ್ನು ಯಾರಲ್ಲೂ ಹೇಳಿರಲಿಲ್ಲ. ಆದರೆ ಈ ವಿಷಯ ಬಹಿರಂಗಗೊಳ್ಳುವು ದರೊಂದಿಗೆ ವಿದ್ಯಾರ್ಥಿಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page