ಸಂಸದರಾಗಲು ಸುರೇಶ್‌ಗೋಪಿ ಅರ್ಹರು-ಎಡರಂಗ ಮೇಯರ್; ಇಕ್ಕಟ್ಟಿಗೆ ಸಿಲುಕಿದ ಎಲ್‌ಡಿಎಫ್

ತೃಶೂರು: ಸಂಸದರಾಗಲು ನಟ ಸುರೇಶ್ ಗೋಪಿ ಓರ್ವ ಸಮರ್ಥ ಹಾಗೂ ಅರ್ಹ ವ್ಯಕ್ತಿಯಾಗಿದ್ದಾರೆಂದು ಎಡರಂಗದ ಆಡಳಿತದಲ್ಲಿರುವ ತೃಶೂರು ಕಾರ್ಪೋರೇಶನ್ ಮೇಯರ್ ಎಂ.ಕೆ. ವರ್ಗೀಸ್ ಹೇಳಿದ್ದು, ಅದು ಎಡರಂಗವನ್ನು ತೀವ್ರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಈ ಹೇಳಿಕೆ ಹೊರಬಂದ ಬೆನ್ನಲ್ಲೇ ಅದಕ್ಕೆ ಸ್ಪಷ್ಟೀಕರಣ ನೀಡುವಂತೆ ಎಡರಂಗ  ವರ್ಗೀಸ್‌ರಿಗೆ ತುರ್ತು ನಿರ್ದೇಶ ನೀಡಿದೆ. ಮತ ಯಾಚನೆಗಾಗಿ ಸುರೇಶ್ ಗೋಪಿ ವರ್ಗೀಸ್‌ರನ್ನು ಕಾಣಲು ಬಂದಾಗ ಅಲ್ಲಿ ನೆರೆದಿದ್ದ ಟಿವಿ ಚಾನೆಲ್‌ನ ಓರ್ವರು ಸಂಸದ ರಾಗಲು ಸುರೇಶ್ ಗೋಪಿ ಫಿಟ್ ವ್ಯಕ್ತಿಯೇ ಎಂದು ಪ್ರಶ್ನಿಸಿದ್ದರು. ಆಗ ಯಾಕೆ ಆಗಬಾರದು ಎಂದು ಅದಕ್ಕೆ ವರ್ಗೀಸ್ ಪ್ರತ್ಯುತ್ತರ ನೀಡಿದ್ದರು. ಅದಾದ ಬೆನ್ನಲ್ಲೇ ಆ ಹೇಳಿಕೆಯನ್ನು ಯುಡಿಎಫ್ ಎಡರಂಗದ ವಿರುದ್ಧ ಒಂದು ಚುನಾವಣಾ ಅಸ್ತ್ರವಾಗಿ  ಪ್ರಯೋಗಿಸತೊಡಗಿದೆ. ಅದು ಎಡರಂಗವನ್ನು ತೀವ್ರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ತನ್ನ ಹೇಳಿಕೆ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಅದಕ್ಕೆ ವರ್ಗೀಸ್  ಸ್ಪಷ್ಟೀಕರಣದೊಂದಿಗೆ ಈಗ ರಂಗಕ್ಕಿಳಿದಿದ್ದಾರೆ. ಎನ್‌ಡಿಎ ಉಮೇದ್ವಾರರಾಗಿರುವ ಸುರೇಶ್‌ಗೋಪಿ ಮತಯಾಚನೆಗಾಗಿ ನನ್ನನ್ನು ಸಮೀಪಿಸಿದ್ದರು. ಆದರೆ ರಾಜಕೀ ಯವಾಗಿ ನಾನು ಅವರನ್ನು ಬೆಂಬಲಿಸಿಲ್ಲ. ಓರ್ವ ಅತಿಥಿಯಾಗಿ ನಾನು ಅವರನ್ನು ಸ್ವಾಗತಿಸಿ, ಚಹಾ ಸತ್ಕಾರ ನೀಡಿದೆ . ಆಗ ಅಲ್ಲಿ ಕೆಲವು ಟಿವಿ ಚಾನೆಲ್‌ನವರೂ ಬಂದಿದ್ದರು. ಆ ವೇಳೆ ನಾನು ನೀಡಿದ ಹೇಳಿಕೆಯನ್ನು ಚಾನೆಲ್‌ನವರು ತಿರುಚಿದ್ದಾರೆ.  ನನ್ನ ಹೇಳಿಕೆಯಲ್ಲಿ ಯಾವುದೇ ರೀತಿಯ ವಿವಾದ ಅಂಶಗಳಿಲ್ಲವೆಂದು ವರ್ಗೀಸ್ ಹೇಳಿದ್ದಾರೆ. ಕಾರ್ಪ ರೇಶನ್ ಚುನಾ ವಣೆಯಲ್ಲಿ ಕಾಂಗ್ರೆಸ್ ಬಂಡು ಕೋರನಾಗಿ ಸ್ಪರ್ಧಿಸಿ ಗೆದ್ದಿದ್ದ ಎಂ.ಕೆ. ವರ್ಗೀಸ್ ಬಳಿಕ  ಎಡರಂಗದ ಬೆಂಬಲದೊಂದಿಗೆ ತೃಶೂರು ಕಾರ್ಪ ರೇಶನ್ ಮೇ ಯರ್ ಆಗಿ ಚುನಾಯಿತರಾಗಿದ್ದರು. ಅಂದಿನಿಂದ ಅವರು ಎಡರಂಗದ ಪಾಳಯಕ್ಕೆ ಸೇರಿದ್ದರು.

Leave a Reply

Your email address will not be published. Required fields are marked *

You cannot copy content of this page