ಸನಾತನ ಸಂಸ್ಕೃತಿ ರಕ್ಷಣೆಗೆ ಮುಂದಾಗೋಣ-ಕೊಂಡೆವೂರು ಶ್ರೀ
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಯವರ 21 ನೇ ಚಾತುರ್ಮಾಸ್ಯ ಮಂಗಲೋತ್ಸವ, 48 ಗಂಟೆಗಳ ಅಖಂಡ ಭಜನೋತ್ಸವದ ಮಂಗಲ ನಡೆಯಿತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ ಭಗವಂತನ ಸ್ಮರಣೆ ವ್ರತನಿಯಮಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ. ಎಲ್ಲರ ಸತ್ಚಿಂತನೆಯಿAದ ಸಾನ್ನಿಧ್ಯ ವೃದ್ಧಿಯಾದ ಕೊಂಡೆವೂರು ಮಠದ ಬೆಳವಣಿಗೆ ಮೂಲಕ ಸನಾತನ ಸಂಸ್ಕೃತಿ ರಕ್ಷಣೆಗೆ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭದ್ರಾವತಿ ಬನಶಂಕರಿ ದೇವಸ್ಥಾನದ ಅಧ್ಯಕ್ಷ ಎಂ. ಪ್ರಭಾಕರ, ಮುಳಿಂಜ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ, ಧಾರ್ಮಿಕ ಮುಂದಾಳುಗಳಾದ ಪಿ ಆರ್ ಶೆಟ್ಟಿ ಪೊಯ್ಯೇಲು, ಶ್ರೀಧರ ಶೆಟ್ಟಿ ಮುಟ್ಟಂ, ಶಶಿಧರ ಶೆಟ್ಟಿ ಗ್ರಾಮಚಾವಡಿ ಸದಾಶಯದ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ಮಾಜಿ ಎಂ ಎಲ್ ಸಿ ಮೋನಪ್ಪ ಭಂಡಾರಿ ಸಂಸ್ಕಾರ ಸಂಸ್ಕೃತಿಗಾಗಿ ಜಗತ್ತೇ ನೋಡುತ್ತಿರುವ ಪವಿತ್ರ ಭರತ ಭೂಮಿಯ ಸನಾತನ ಧರ್ಮವನ್ನು ಉಳಿಸಿ ಬೆಳೆಸಲು ಒಗ್ಗಟ್ಟಾಗೋಣ ಎಂದು ನುಡಿದರು. ಶ್ರಾವಣ್ಯ ಕೊಂq ೆವೂರು ಪ್ರಾರ್ಥನೆಗೈದರು. ಗಂಗಾಧರ ಕೊಂಡೆವೂರು ಸ್ವಾಗತಿಸಿ, ಸರ್ವೇಶ್ ಕೊಂಡೆವೂರು ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು. ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀಗಳವರಿಂದ ಮೃತ್ತಿಕಾ ವಿಸರ್ಜನೆ ನಡೆದು ಭಕ್ತಾದಿಗಳು ಪವಿತ್ರ ತೀರ್ಥ ಸ್ನಾನ ಮಾಡಿ ಮಂಗಲಮAತ್ರಾಕ್ಷತೆ ಸ್ವೀಕರಿಸಿದರು.